ಮೊದಲ ಬಾರಿ ದಲಿತ ಮಹಿಳೆಗೆ ಚೆನ್ನೈ ಮೇಯರ್ ಪಟ್ಟ !

Prasthutha|

ಚೆನ್ನೈ: ಮೊದಲ ಬಾರಿ ಚೆನ್ನೈ ಕಾರ್ಪೊರೇಷನ್ ಗೆ ಮೇಯರ್ ಆಗಿ ಡಿಎಂಕೆ ಪಕ್ಷದ 28 ವರ್ಷದ ಪ್ರಿಯಾ ನಾಮನಿರ್ದೇಶನಗೊಂಡಿದ್ದಾರೆ. ಈ ಮೂಲಕ ಮೇಯರ್ ಹುದ್ದೆಗೆ ಏರುತ್ತಿರುವ ಮೂರನೇ ಮಹಿಳೆ ಎಂಬ ಖ್ಯಾತಿಗೂ ಒಳಗಾಗಿದ್ದಾರೆ.

- Advertisement -

ಚೆನ್ನೈನಲ್ಲಿ ಮೇಯರ್ ಹುದ್ದೆಯನ್ನು ಅಲಂಕರಿಸಿದ ಮೊದಲ ದಲಿತ ಮತ್ತು ಕಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚೆನ್ನೈನ ಇತಿಹಾಸದಲ್ಲಿ ತಾರಾ ಚೆರಿಯನ್ ಮತ್ತು ಕಾಮಾಕ್ಷಿ ಜಯರಾಮನ್ ನಂತರ ಈ ಹುದ್ದೆಯನ್ನು ಅಲಂಕರಿಸಿದ ಮೂರನೇ ಮಹಿಳೆ ಪ್ರಿಯಾ. ಚೆನ್ನೈ ಪಾಲಿಕೆಯಲ್ಲಿ ಡಿಎಂಕೆ ಬಹುಮತ ಹೊಂದಿದೆ. ಹಾಗಾಗಿ ಪ್ರಿಯಾ ಶೀಘ್ರದಲ್ಲೇ ಮೇಯರ್ ಆಗಿ ಔಪಚಾರಿಕವಾಗಿ ಆಯ್ಕೆಯಾಗಲಿದ್ದಾರೆ.

ಉತ್ತರ ಚೆನ್ನೈನ ತಿರುವಿ ಕಾ ನಗರದಿಂದ ಆರ್ ಪ್ರಿಯಾ ಟಿಎನ್ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ 74 ರಿಂದ ಗೆದ್ದಿದ್ದಾರೆ. ಗ್ರೇಟರ್ ಚೆನ್ನೈ ಕಾರ್ಪೊರೇಶನ್ ಸೇರಿದಂತೆ ಎಲ್ಲಾ 21 ಮುನ್ಸಿಪಲ್ ಕಾರ್ಪೊರೇಷನ್ ಗಳಲ್ಲಿ ಡಿಎಂಕೆ ಬಹುಮತವನ್ನು ಗೆದ್ದುಕೊಂಡಿತು ಮತ್ತು 138 ಪುರಸಭೆಗಳು ಮತ್ತು 490 ಪಟ್ಟಣ ಪಂಚಾಯಿತಿಗಳಲ್ಲಿ ಜಯಗಳಿಸಿತು.



Join Whatsapp
Exit mobile version