Home ಟಾಪ್ ಸುದ್ದಿಗಳು ಫಲಿಸಿದ ರಾಮಲಿಂಗಾ ರೆಡ್ಡಿ ಸಂಧಾನ: ಬೆಂಗಳೂರು ಬಂದ್ ಹಿಂಪಡೆದ ಖಾಸಗಿ ಸಾರಿಗೆ ಒಕ್ಕೂಟ

ಫಲಿಸಿದ ರಾಮಲಿಂಗಾ ರೆಡ್ಡಿ ಸಂಧಾನ: ಬೆಂಗಳೂರು ಬಂದ್ ಹಿಂಪಡೆದ ಖಾಸಗಿ ಸಾರಿಗೆ ಒಕ್ಕೂಟ

ಬೆಂಗಳೂರು: ಸೋಮವಾರ ಬೆಳಗ್ಗಿನಿಂದಲೇ ನಡೆಯುತ್ತಿದ್ದ ಖಾಸಗಿ ಪ್ರಯಾಣಿಕ ವಾಹನಗಳ ಒಕ್ಕೂಟದ ಕರೆ ಆಧರಿಸಿದ ಬಂದ್ ನ್ನು ಹಿಂದಕ್ಕೆ ಪಡೆಯಲಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ನೀಡಿದ ಭರವಸೆ ಆಧರಿಸಿ ತಕ್ಷಣದಿಂದಲೇ ಬಂದ್ ನ್ನು ಹಿಂದಕ್ಕೆ ಪಡೆದಿರುವುದಾಗಿ ಒಕ್ಕೂಟ ಪ್ರಕಟಿಸಿದೆ.


ಇದರೊಂದಿಗೆ ಆಟೋ, ಟ್ಯಾಕ್ಸಿ, ಬಸ್ ಸೇರಿದಂತೆ ಖಾಸಗಿ ಬಸ್ಗಳ ಸಂಚಾರ ತಕ್ಷಣದಿಂದ ಮರು ಆರಂಭಗೊಳ್ಳಲಿದ್ದು,, ಪ್ರಯಾಣಿಕರು ನಿರಾಳರಾಗುವಂತಾಗಿದೆ.


ಖಾಸಗಿ ಸಾರಿಗೆ ಕೆಲ ಬೇಡಿಕೆ ಈಡೇರಿಸಲು ಭರವಸೆ ನೀಡಿದ್ದೇನೆ. ಕೆಲವು ಬೇಡಿಕೆಗಳನ್ನು ಈಡೇರಿಸಲು ಸಮಯ ಬೇಕಾಗುತ್ತದೆ. ನಾನೇ ಖಾಸಗಿ ಸಾರಿಗೆಯವರ ಪರ ಇದ್ದೇನೆ. ಯಾವುದೇ ಅನುಮತಿ ಇಲ್ಲದೆ ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದಾರೆ. ಸದ್ಯದಲ್ಲೇ ಹೊಸ ಆ್ಯಪ್ ಮಾಡಿಕೊಡುತ್ತೇವೆ ಎಂದು ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

Join Whatsapp
Exit mobile version