Home ಟಾಪ್ ಸುದ್ದಿಗಳು ನವದೆಹಲಿ: ಜನಸಂಖ್ಯಾ ನಿಯಂತ್ರಣಾ ಖಾಸಗಿ ಸದಸ್ಯ ಮಸೂದೆ ರಾಜ್ಯಸಭೆಯಲ್ಲಿ ವಾಪಸ್

ನವದೆಹಲಿ: ಜನಸಂಖ್ಯಾ ನಿಯಂತ್ರಣಾ ಖಾಸಗಿ ಸದಸ್ಯ ಮಸೂದೆ ರಾಜ್ಯಸಭೆಯಲ್ಲಿ ವಾಪಸ್

ನವದೆಹಲಿ: ಹೆಚ್ಚುತ್ತಿರುವ ಜನಸಂಖ್ಯೆ ನಿಯಂತ್ರಿಸಲು ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ರಾಕೇಶ್ ಸಿನ್ಹಾ ಅವರು ಮಂಡಿಸಿದ ಖಾಸಗಿ ಸದಸ್ಯ ಮಸೂದೆಯನ್ನು ಶುಕ್ರವಾರ ಹಿಂಪಡೆಯಲಾಗಿದೆ.

ಎರಡು ಮಕ್ಕಳ ನಿಯಮವನ್ನು ಕಡ್ಡಾಯಗೊಳಿಸುವ ಜನಸಂಖ್ಯಾ ನಿಯಂತ್ರಣಾ ಮಸೂದೆ 2019 ಅನ್ನು ಬಿಜೆಪಿ ಸಂಸದರು ಹಿಂಪಡೆದರು.

ಎರಡು ಮಕ್ಕಳ ನಿಯಮವನ್ನು ಉಲ್ಲಂಘಿಸುವ ಜನರನ್ನು ಸಂಸದ, ಶಾಸಕ ಅಥವಾ ಸ್ಥಳೀಯಾಡಳಿತದ ಯಾವುದೇ ಮಂಡಳಿಯ ಸದಸ್ಯರಾಗಿ ಆಯ್ಕೆ ಮಾಡದಂತೆ ಅನರ್ಹಗೊಳಿಸುವುದನ್ನು ಈ ಮಸೂದೆ ಪ್ರತಿಪಾದಿಸಿದೆ.

ಆದಾಗ್ಯೂ ಮಸೂದೆಯನ್ನು ಹಿಂಪಡೆಯುವ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಸಿನ್ಹಾ, ಸರ್ಕಾರ ಸತತ ಪ್ರಯತ್ನ ನಡೆಸುತ್ತಿರುವುದರಿಂದ ಜಾತಿ, ಧರ್ಮ, ಭಾಷೆ ಮತ್ತು ಜಿಲ್ಲೆಗಿಂತ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ.

ಸದ್ಯ ಮಸೂದೆಯ ಮೇಲಿನ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವಿಯಾ, ಜನಸಂಖ್ಯೆಯ ನಿಯಂತ್ರಣವು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು ಮತ್ತು ಬಲವಂತ, ಕಡ್ಡಾಯಗೊಳಿಸಬಾರದು ಎಂದು ತಿಳಿಸಿದ್ದಾರೆ.

Join Whatsapp
Exit mobile version