Home ಕರಾವಳಿ ಮಂಗಳೂರು: ಸಿಬ್ಬಂದಿ ವೇತನ ಅನುದಾನಕ್ಕಾಗಿ ಆಗ್ರಹಿಸಿ ಖಾಸಗಿ ಐಟಿಐ ನೌಕರರ ಪ್ರತಿಭಟನೆ

ಮಂಗಳೂರು: ಸಿಬ್ಬಂದಿ ವೇತನ ಅನುದಾನಕ್ಕಾಗಿ ಆಗ್ರಹಿಸಿ ಖಾಸಗಿ ಐಟಿಐ ನೌಕರರ ಪ್ರತಿಭಟನೆ

ಮಂಗಳೂರು: ಕರ್ನಾಟಕ ರಾಜ್ಯ ಖಾಸಗಿ ಐಟಿಐ ಸಂಘ ಒಕ್ಕೂಟದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸದಸ್ಯರು ಉದ್ಯೋಗ ಮತ್ತು ತರಬೇತಿ ಕ್ಷೇತ್ರದಲ್ಲಿ ಕೆಲಸ ಒದಗಿಸುವಂತೆ ಹಾಗೂ ನೌಕರರಿಗೆ ಅನುದಾನ ಕೂಡಲೆ ಒದಗಿಸುವಂತೆ ಮಂಗಳೂರಿನ ಪುರಭವನದ ಬಳಿ ಗುರುವಾರ ಪ್ರತಿಭಟನೆ ನಡೆಸಿದರು.

ಸಂಚಾಲಕ ನವೀನ್ ಕುಮಾರ್ ಕೆ. ಎಸ್. ಮಾತನಾಡಿ, ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ನೀಡಿ ಅವರಿಗೆ ನೌಕರಿ ಸುಲಭವಾಗುವಂತೆ ಮಾಡುವ ಐಟಿಐ ನೌಕರರ ಜೀವನ ಸುಗಮವಾಗಿಲ್ಲ. ಖಾಸಗಿ ಸಂಸ್ಥೆಗಳು ಕಷ್ಟದಿಂದ ನಡೆಯುತ್ತಿದೆ. ಸರಕಾರ ನಮ್ಮನ್ನು ಕರೆಸಿ ಮಾತನಾಡಿದರೂ ನಮ್ಮ ಸಮಸ್ಯೆ ಪರಿಹರಿಸಿಲ್ಲ ಎಂದು ಆರೋಪಿಸಿದರು.

ರಾಜ್ಯದಲ್ಲಿ 200 ಸರಕಾರಿ, 196 ಅನುದಾನಿತ ಮತ್ತು 1,300 ಕಾಸಗಿ ಐಟಿಐಗಳು ಇವೆ. ಇವುಗಳಲ್ಲಿ ಕಾಸಗಿ ಐಟಿಐಗಳು ತುಂಬ ತೊಂದರೆಯಲ್ಲಿವೆ. ಅವುಗಳನ್ನು ಸರಿಪಡಿಸಲು ಸರಕಾರ ಕೂಡಲೆ ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಸಂಘದ ಹುಬ್ಬಳ್ಳಿ ಮತ್ತು ಬೆಂಗಳೂರು ಘಟಕದ ಪ್ರತಿನಿಧಿಗಳು ಹಾಜರಿದ್ದರು.

Join Whatsapp
Exit mobile version