Home ಕರಾವಳಿ ಹಿಜಾಬ್ ಹಕ್ಕಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ಮೂವರು ಉಡುಪಿ ವಿದ್ಯಾರ್ಥಿನಿಯರಿಗೆ ಪ್ರಾಕ್ಟಿಕಲ್ ಪರೀಕ್ಷೆಗೆ ಅವಕಾಶ ನಿರಾಕರಿಸಿದ ಪ್ರಾಂಶುಪಾಲ...

ಹಿಜಾಬ್ ಹಕ್ಕಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ಮೂವರು ಉಡುಪಿ ವಿದ್ಯಾರ್ಥಿನಿಯರಿಗೆ ಪ್ರಾಕ್ಟಿಕಲ್ ಪರೀಕ್ಷೆಗೆ ಅವಕಾಶ ನಿರಾಕರಿಸಿದ ಪ್ರಾಂಶುಪಾಲ ರುದ್ರೇಗೌಡ !

►”5 ನಿಮಿಷದಲ್ಲಿ ಇಲ್ಲಿಂದ ಹೋಗಿ, ಇಲ್ಲದಿದ್ದರೆ ಪೊಲೀಸ್ ದೂರು ನೀಡುತ್ತೇನೆ” ಎಂದು ಬೆದರಿಕೆ ಹಾಕಿದ ರುದ್ರೇಗೌಡ

ಉಡುಪಿ : ಹಿಜಾಬ್ ಧರಿಸುವ ಹಕ್ಕಿನ ಕುರಿತಾಗಿ ಹೈಕೋರ್ಟ್ ಮೆಟ್ಟಿಲೇರಿರುವ ಉಡುಪಿ ಸರ್ಕಾರಿ ಕಾಲೇಜಿನ ಆರು ವಿದ್ಯಾರ್ಥಿನಿಯರ ಪೈಕಿ ಮೂವರು ವಿದ್ಯಾರ್ಥಿನಿಯರಿಗೆ ಇಂದು ಕಾಲೇಜಿನಲ್ಲಿ ನಡೆಯಬೇಕಿದ್ದ ಪ್ರಾಕ್ಟಿಕಲ್ ಪರೀಕ್ಷೆಗೆ ಅವಕಾಶ ನಿರಾಕರಿಸಲಾಗಿದೆ. ಪರೀಕ್ಷೆಗೆಂದು ಹೋದ ಮೂವರಿಗೆ ಪ್ರಾಂಶುಪಾಲ ರುದ್ರೇಗೌಡ ಬೆದರಿಕೆ ಹಾಕಿದ್ದಾರೆ. ನೀವು ಇಲ್ಲಿಂದ 5 ನಿಮಿಷದಲ್ಲಿ ಹೋದರೆ ಸರಿ, ಇಲ್ಲದೇ ಇದ್ದರೆ ಪೊಲೀಸ್ ದೂರು ನೀಡಬೇಕಾಗುತ್ತದೆ ಎಂದು ರುದ್ರೇಗೌಡ ಬೆದರಿಸಿದ್ದಾನೆ ಎಂದು ಓರ್ವ ವಿದ್ಯಾರ್ಥಿನಿ ಅಲ್ಮಾಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾಳೆ.    

ತನ್ನ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅಲ್ಮಾಸ್, “ನಾವು ನಮ್ಮ ರೆಕಾರ್ಡ್ ಪುಸ್ತಕವನ್ನು ಪೂರ್ತಿಗೊಳಿಸಿ ಉತ್ತಮ ಭರವಸೆಯಿಂದ ಪ್ರಾಕ್ಟಿಕಲ್ ಪರೀಕ್ಷೆಗೆಂದು ಹೋದಾಗ ಪ್ರಾಂಶುಪಾಲ ರುದ್ರೇಗೌಡ, “5 ನಿಮಿಷಗಳಲ್ಲಿ ನೀವು ಇಲ್ಲಿ ಹೋಗಬೇಕು. ಇಲ್ಲದೇ ಇದ್ದರೆ ಪೊಲೀಸರನ್ನು ಕರೆಸಿ ದೂರು ನೀಡಬೇಕಾಗುತ್ತದೆ” ಎಂದು ಬೆದರಿಕೆ ಹಾಕಿದ್ದು ನಮಗೆ ಬಹಳ ನಿರಾಶೆಯಾಗಿದೆ” ಎಂದು ಹೇಳಿದ್ದಾಳೆ.    

ಹಿಜಾಬ್ ವಿರುದ್ಧ ಕೆಲವರು ಬಿತ್ತಿದ ದ್ವೇಷದ ಪರಿಣಾಮದಿಂದಾಗಿ ಕಾಲೇಜಿನಿಂದ ನಾನು ಹೊಂದಿದ್ದ ಭರವಸೆಗಳು ಮತ್ತು ನನ್ನ ಕನಸುಗಳು ಛಿದ್ರವಾಗುತ್ತಿವೆ ಎಂದು ತನ್ನ ಟ್ವೀಟ್ ನಲ್ಲಿ ಅಲ್ಮಾಸ್ ಬೇಸರದಿಂದ ಹೇಳಿಕೊಂಡಿದ್ದಾಳೆ. ಹೈಕೋರ್ಟ್ ಗೆ ರಿಟ್ ಸಲ್ಲಿಸಿದ ಉಡುಪಿ ಸರ್ಕಾರಿ ಕಾಲೇಜಿನ ಆರು ವಿದ್ಯಾರ್ಥಿನಿಯರಲ್ಲಿ ಅಲ್ಮಾಸ್, ಹಝ್ರ ಶಿಫಾ ಹಾಗೂ ಬೀಬಿ ಆಯಿಶ ಅವರು ದ್ವಿತೀಯ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾಗಿದ್ದಾರೆ.  ಈಗಾಗಲೇ ಹೈಕೋರ್ಟ್ ವಿದ್ಯಾರ್ಥಿನಿಯರ ಅರ್ಜಿ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿದೆ

ಈ ಕುರಿತು ಪ್ರತಿಕ್ರಿಯೆ ಪಡೆಯಲು ಪ್ರಾಂಶುಪಾಲ ರುದ್ರೇಗೌಡರ ಮೊಬೈಲ್ ಸಂಖ್ಯೆಗೆ ‘ಪ್ರಸ್ತುತ’ ತಂಡ ಕರೆ ಮಾಡಿದ್ದು, ಎಂದಿನಂತೆ ರುದ್ರೇಗೌಡ ಕರೆ ಸ್ವೀಕರಿಸದೆ ನುಣುಚಿಕೊಂಡಿದ್ದಾರೆ.

Join Whatsapp
Exit mobile version