Home ಟಾಪ್ ಸುದ್ದಿಗಳು ನಿತ್ಯ ಕಾಲೇಜಿನ ಕಸ ಗುಡಿಸಿ, ಪಾಠ ಮಾಡುವ ಪ್ರಾಂಶುಪಾಲರು!

ನಿತ್ಯ ಕಾಲೇಜಿನ ಕಸ ಗುಡಿಸಿ, ಪಾಠ ಮಾಡುವ ಪ್ರಾಂಶುಪಾಲರು!


ಶಿಕ್ಷಣ ಸಚಿವರ ಜಿಲ್ಲೆಯ ಕಾಲೇಜಿನಲ್ಲಿ ಸಿಬ್ಬಂದಿ ಕೊರತೆ

ತುಮಕೂರು: ನಗರದ ಜೂನಿಯರ್ ಕಾಲೇಜು ಆವರಣದಲ್ಲಿರುವ ಚಿತ್ರಕಲಾ ಪದವಿ ಕಾಲೇಜಿನಲ್ಲಿ ಪ್ರಾಶುಂಪಾಲರೇ ಕಾಲೇಜಿನ ಕಸ ಗುಡಿಸಿ ಸ್ವಚ್ಛವಾಗಿಡುತ್ತಿರುವುದಲ್ಲದೆ, ಇತರೆ ಕೆಲಸಗಳನ್ನು ತಾವೇ ನಿರ್ವಹಿಸುತ್ತಿದ್ದಾರೆ.


ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಕಾಲೇಜಿನ ಆವರಣವನ್ನು ಅಲ್ಲಿನ ಪ್ರಾಂಶುಪಾಲರೇ ಪ್ರತಿದಿನ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಸಚಿವರ ಜಿಲ್ಲೆಯಲ್ಲಿ ಸಿಬ್ಬಂದಿ ಕೊರತೆಯ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ.

ಜೂನಿಯರ್ ಕಾಲೇಜು ಆವರಣದಲ್ಲಿರುವ ಚಿತ್ರಕಲಾ ಪದವಿ ಕಾಲೇಜಿಗೆ ಇದುವರೆಗೂ ಖಾಯಂ ಹುದ್ದೆಗಳ ನೇಮಕವಾಗಿಲ್ಲ. ಈ ಹಿಂದೆ ಪ್ರೌಢಶಾಲೆಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕರನ್ನೇ ಇಲ್ಲಿಗೆ ಹೆಚ್ಚುವರಿಯಾಗಿ ನಿಯೋಜನೆ ಮಾಡಲಾಗಿದೆ. ಪ್ರಾಂಶುಪಾಲರಾದ ಸಿ.ಸಿ. ಭಾರಕೇರ ಮಾತ್ರ ಕಾಲೇಜಿನಲ್ಲಿ ಸಿಬ್ಬಂದಿಯಾಗಿದ್ದು, ಕಚೇರಿ ಕೆಲಸ, ವಿದ್ಯಾರ್ಥಿಗಳಿಗೆ ಪಾಠ, ಕಚೇರಿ ಹಾಗೂ ಕಾಲೇಜು ಆವರಣ ಸ್ವಚ್ಛಗೊಳಿಸುವುದು ಸೇರಿದಂತೆ ಎಲ್ಲಾ ಕೆಲಸಗಳನ್ನು ಇವರೇ ನಿರ್ವಹಿಸುತ್ತಿದ್ದಾರೆ.

ಕಾಲೇಜಿನಲ್ಲಿ ಕಟ್ಟಡ ಸಮಸ್ಯೆ, ಸಿಬ್ಬಂದಿ ಕೊರತೆ, ಮೂಲ ಸೌಲಭ್ಯಗಳ ಸಮಸ್ಯೆ ಇದೆ. ಹೀಗಾಗಿ ಪಾಲಕರು ತಮ್ಮ ಮಕ್ಕಳನ್ನು ಕಾಲೇಜಿಗೆ ಕಳಿಸದ ಪರಿಣಾಮ ವಿದ್ಯಾರ್ಥಿ ದಾಖಲಾತಿ ಕಡಿಮೆ ಇದೆ. ಅಗತ್ಯವಿರುವ 12 ಮಂದಿ ಸಿಬ್ಬಂದಿ ನೇಮಕಾತಿಗೆ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ಇದರ ಜೊತೆಗೆ ಅನುದಾನ ಕೂಡ ಬಿಡುಗಡೆ ಮಾಡಿಲ್ಲ. ಹೀಗಾಗಿ ಸ್ವತಃ ಪ್ರಾಂಶುಪಾಲರೇ ಕಸಗುಡಿಸುವುದರಿಂದ ಹಿಡಿದು ಎಲ್ಲಾ ಕೆಲಸವನ್ನು ನಿಭಾಯಿಸುತ್ತಿದ್ದಾರೆ.

Join Whatsapp
Exit mobile version