ರಿಯಾದ್: ಸೌದಿ ಅರೇಬಿಯದ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ , ತಮ್ಮ ಪುತ್ರ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಪ್ರಧಾನಿಯಾಗಿ ನೇಮಿಸಲು ರಾಜಾದೇಶ ಹೊರಡಿಸಿದ್ದಾರೆ.
ಸೌದಿ ಅರೇಬಿಯಾದ ಪ್ರಬಲ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಲಾಗಿದ್ದು, ಹಲವು ವರ್ಷಗಳಿಂದ ಅವರು ಕೊಲ್ಲಿ ರಾಷ್ಟ್ರದ ಆಡಳಿತಗಾರರಾಗಿದ್ದರು ಮತ್ತು ಈ ಹಿಂದೆ ರಾಜ ಸಲ್ಮಾನ್ ಮತ್ತು ರಕ್ಷಣಾ ಸಚಿವರ ಅಡಿಯಲ್ಲಿ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.
ಯುವರಾಜ ಮೊಹಮ್ಮದ್ ಅವರ ಸ್ಥಾನಕ್ಕೆ ಅವರ ಕಿರಿಯ ಸಹೋದರ ಖಾಲಿದ್ ಬಿನ್ ಸಲ್ಮಾನ್ ಅವರು ರಕ್ಷಣಾ ಸಚಿವರಾಗಿ ನೇಮಕಗೊಂಡಿದ್ದಾರೆ.