ಕೋವಿಡ್‌ ವಿರುದ್ಧ ಶೀಘ್ರದಲ್ಲೇ ನಾಸಿಕ ಲಸಿಕೆ : ಪ್ರಧಾನಿ ಮೋದಿ

Prasthutha|

ನವದೆಹಲಿ : ಕೋವಿಡ್‌ ಸೋಂಕನ್ನು ನಿಯಂತ್ರಿಸಲು ನಮಗಿರುವ ಬಹುದೊಡ್ಡ ಅಸ್ತ್ರ ಕೋವಿಡ್‌ ಮಾರ್ಗಸೂಚಿ ಪಾಲನೆ ಮತ್ತು ಲಸಿಕೆ ಪಡೆಯುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೋವಿಡ್‌ ನಿಯಂತ್ರಣದಲ್ಲಿ ಲಸಿಕೆ ನಮಗೆ ಅತಿದೊಡ್ಡ ರಕ್ಷಾ ಕವಚ ಎಂದು ಪ್ರಧಾನಿ ಹೇಳಿದ್ದಾರೆ.

- Advertisement -

ಇಂದು ಸಂಜೆ ದೇಶದ ನಾಗರಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೋವಿಡ್‌ ನಿಯಂತ್ರಣಕ್ಕೆ ಲಸಿಕೆಯ ಮಹತ್ವವನ್ನು ಒತ್ತಿ ಹೇಳಿದ್ದಾರೆ.

ಕೋವಿಡ್‌ ಇದೊಂದು ಮಹಾಮಾರಿ. ಈ ಮಹಾಮಾರಿ ಆಧುನಿಕ ವಿಶ್ವ ನೋಡಿಲ್ಲ, ಅನುಭವಿಸಿಲ್ಲ. ಇಂಥ ಮಹಾಮಾರಿ ವಿರುದ್ಧ ಎಲ್ಲಾ ಒಂದಾಗಿ ಹೋರಾಡಿದ್ದೇವೆ. ಆಸ್ಪತ್ರೆ, ಲ್ಯಾಬ್‌ ಇತ್ಯಾದಿಗಳ ಹೊಸ ಆರೋಗ್ಯ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ. ಜಗತ್ತಿನಲ್ಲಿ ಏನೆಲ್ಲಾ ಇವೆಯೋ ಅವೆಲ್ಲವನ್ನೂ ತರಿಸಿಕೊಳ್ಳುವ ಯತ್ನ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

ನಾವು ಬಹುಬೇಗ ಲಸಿಕೆ ಕಂಡು ಹಿಡಿದೆವು ಎಂದರು. ಸದ್ಯ ದೇಶದಲ್ಲಿ ಏಳು ಕಂಪೆನಿಗಳು ತೊಡಗಿಕೊಂಡಿವೆ. ಇನ್ನೂ ಮೂರು ಲಸಿಕೆ ತಯಾರಿ ನಡೆಯುತ್ತಿದೆ. ಬೇರೆ ದೇಶಗಳಿಂದಲೂ ತರಿಸಿಕೊಳ್ಳಲೂ ಚಿಂತಿಸಲಾಗುತ್ತಿದೆ. ಈ ಎಲ್ಲದರ ಮಧ್ಯೆ ಎರಡು ಲಸಿಕೆ ಪ್ರಯೋಗ ನಡೆಯುತ್ತಿದೆ. ಅದರಲ್ಲೂ ನಾಸಿಕ ಲಸಿಕೆ (ನೇಸಲ್‌ ವ್ಯಾಕ್ಸಿನ್)‌ ತರಲು ಪ್ರಯೋಗ ತಡೆಯುತ್ತಿದ್ದು, ಅದು ಬಂದರೆ ಲಸಿಕೆ ಮೂಲಕ ಕೋವಿಡ್‌ ತಡೆಯುವ ಕೆಲಸ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಲಿದೆ ಎಂದರು.

Join Whatsapp