June 11, 2021

ಅಚ್ಛೇ ದಿನ್ ಬರಲಿದೆ ಎಂದಿದ್ದ ಪ್ರಧಾನಿ ನರಕ ತೋರಿಸುತ್ತಿದ್ದಾರೆ : ಸಿದ್ದರಾಮಯ್ಯ

ಬೆಂಗಳೂರು: ಅಚ್ಛೇ ದಿನ್ ಬರಲಿದೆ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ನರಕ ನೋಡುತ್ತಿದ್ದೇವೆ. ಇಂತಹ ನರಕದ ದಿನಗಳನ್ನು ನಾವು ಹಿಂದೆಂದೂ ಕಂಡಿರಲಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ನರಕ ಏನು ಎಂಬುದನ್ನು ನಾವು ನೋಡಿರಲಿಲ್ಲ. ಆದರೆ ಮೋದಿಯವರು ಅದನ್ನು ಈಗ ತೋರಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿರಂತರವಾಗಿ ಏರಿಸುವ ಮೂಲಕ ಕೊರೊನಾದಿಂದ ಸಂಕಷ್ಟದಲ್ಲಿರುವ ಜನರ ಮೇಲೆ ಗದಾ ಪ್ರಹಾರ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರದೇಶ ಕಾಂಗ್ರೆಸ್ ಸಮಿತಿ ಇಂದು ಶಿವಾನಂದ ವೃತ್ತದ ಪೆಟ್ರೋಲ್ ಬಂಕ್ ಮುಂಭಾಗ 100-ನಾಟೌಟ್ ಹೆಸರಿನಲ್ಲಿ ಪ್ರತಿಭಟನೆ ನಡೆಸಿತು. ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು,‌ದೇಶದಲ್ಲಿ ಪೆಟ್ರೋಲ್, ಡಿಸೇಲ್ ಅಡುಗೆ ಅನಿಲ ಬೆಲೆ ನಿರಂತರವಾಗಿ ಏರಿಕೆ ಆಗುತ್ತಿದೆ. ಬೆಲೆ ಏರಿಕೆ ಖಂಡಿಸಿ ವಿನೂತನ ಪ್ರತಿಭಟನೆ ದೇಶವ್ಯಾಪಿ ನಡೆಯುತ್ತಿದೆ. ರಾಜ್ಯದಲ್ಲೂ ಎಐಸಿಸಿ ಆದೇಶದ ಮೇರೆಗೆ ಐದು ದಿನ ಕೆಪಿಸಿಸಿ ವತಿಯಿಂದ ಐದು ಸಾವಿರ ಪೆಟ್ರೋಲ್ ಬಂಕ್ ಗಳಲ್ಲಿ  ಪ್ರತಿಭಟನೆ ನಡೆಯುತ್ತಿದೆ‌ ಎಂದರು.

ಮನಮೋಹನ ಸಿಂಗ್ ಅವರ ಸರ್ಕಾರದದಲ್ಲಿ ಬೆಲೆ ಏರಿಕೆ ಖಂಡಿಸಿ ಬಿಜೆಪಿಯವರು ಹಾಹಾಕಾರ ಸೃಷ್ಟಿ ಮಾಡಿದ್ದರು ಮೋದಿ ಅವರೇ ಪ್ರತಿಭಟನೆ ನಡೆಸಿದ್ದರು. ಬಳಿಕ ಅವರು ಜನರಿಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದರು ಅಚ್ಛೇದಿನ್ ಬರಲಿದೆ ಎಂದು ಹೇಳಿದ್ದರು. ಆದರೆ ಈವತ್ತು ನರಕದ ದಿನಗಳು ಬಂದಿವೆ.‌ ನಾವು ನರಕ ನೋಡಿಲ್ಲ. ಕೋವಿಡ್ ಸಂಕಷ್ಟವಿದೆ. ಈ‌ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡಿದ್ದಾರೆ ಜನ ಸಾಮಾನ್ಯರು ಜೀವನ ನಡೆಸುವುದು ಹೇಗೆ.‌ಲ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆಯೂ ಏರಿಕೆ ಆಗುತ್ತದೆ. ಮೋದಿಯೇ ಹಿಂದೆ ಬೆಲೆ ಏರಿಕೆಯನ್ನು ವಿರೋಧಿಸಿದ್ದರು.‌ ಸಾಮಾನ್ಯ ಜನರು ಸಣ್ಣ ವಾಹನ ಇಟ್ಟುಕೊಂಡಿರುತ್ತಾರೆ. ಅವರ ಪರಿಸ್ಥಿತಿ ಏನು? ಲಾಕ್ ಡೌನ್ ನಿಂದ ಅನೇಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.‌ಉತ್ಪಾದನೆ ನಿಂತು ಹೋಗಿದೆ.

ಜನರ ರಕ್ತ ಹೀರುತ್ತಿರುವ ನರೇಂದ್ರ ಮೋದಿಯವರಿಗೆ ನಾಚಿಕೆ ಆಗುವುದಿಲ್ಲವೇ ?‌ ನಮ್ಮ ರಾಜ್ಯದಿಂದ ೧ ಲಕ್ಷ ೧೬ ಸಾವಿರ ಕೋಟಿ , ಅಬಕಾರಿ ಸುಂಕ , ೧೪ ಸಾವಿರ ಕೋಟಿ ಮಾರಾಟ ತೆರಿಗೆ ಕೇಂದ್ರಕ್ಕೆ ಹೋಗುತ್ತದೆ.  ನರೇಂದ್ರ ‌ಮೋದಿಯವರಿಗೆ ನಾಚಿಕೆಯಾಗಬೇಕು.‌‌ ಇಷ್ಟೊಂದು ತೆರಿಗೆ ತೆಗೆದುಕೊಂಡು ಮತ್ತೆ ಪೆಟ್ರೋಲ್ ಮೇಲೆ ತೆರಿಗೆ ಹಾಕಿದ್ದಾರೆ. ಬಿಜೆಪಿಯವರು ಜನರಿಗೆ ತಪ್ಪು ಮಾಹಿತಿ ನೀಡಿ, ಸುಳ್ಳು ಹೇಳಿ ಅಧಿಕಾರ ಮಾಡುತ್ತಿದ್ದಾರೆ.‌ ಮೋದಿಯವರು ಬೆಲೆ ಏರಿಕೆ ಮಾಡಿ ಜನರ ರಕ್ತ‌ ಕುಡಿಯುವ ತಿಗಣೆಯಂತೆ ಆಗಿದ್ದಾರೆ. ರಾವಣನ  ಶ್ರೀಲಂಕಾದಲ್ಲಿ ಪೆಟ್ರೋಲ್ ದರ 59 ರೂ.‌‌ ರಾಮನ ಭಾರತದಲ್ಲಿ  ಬೆಲೆ 100 ರೂ.‌‌ ರಾವಣ ರಾಜ್ಯ ಬಡವರ ಪರವಾಗಿದೆ.  ರಾಮ ರಾಜ್ಯದಲ್ಲಿ ಬಡವರ ರಕ್ತ ಹೀರಲಾಗುತ್ತಿದೆ. ಬೈಕ್ ನಲ್ಲಿ ಓಡಾಡುವ ಯುವಕರು ಅಚ್ಚೇ ದಿನ್ ಬರುತ್ತದೆ ಎನ್ನುತ್ತಿದ್ದರು. ಈಗ ಅವರೇ ಶಾಪ ಹಾಕುತ್ತಿದ್ದಾರೆ

ಮೋದಿ ಕೇವಲ ಭಾವನಾತ್ಮಕವಾಗಿ ಮಾತನಾಡಿ‌ ಜನರ ದಾರಿ ತಪ್ಪಿಸುತ್ತಿದ್ದಾರೆ.‌ ಕೋಮುವಾದ ಬಿತ್ತುವುದೇ ಬಿಜೆಪಿ ಕೆಲಸ. ಜಿಡಿಪಿ ದರ ಇಳಿಮುಖವಾಗಿದೆ.‌ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡುತ್ತೇವೆ ಎಂದರು.‌ ಮೋದಿ ಪ್ರಧಾನಿಯಾಗಿ ೭ ವರ್ಷ ಆಗಿದೆ ೧೪ ಕೋಟಿ ಜನರಿಗೆ ಉದ್ಯೋಗ ಕೊಡಲಿಲ್ಲ.‌ ಬಡವರಿಗೆ ಅಕ್ಕಿ ಕೊಡುವುದಕ್ಕೇ ಆಗದ‌‌ ಇಂಥ ಕೆಟ್ಟ ಸರ್ಕಾರವನ್ನ ನಾನು‌ ನೋಡಿರಲಿಲ್ಲ.‌ ಕಳಪೆ ಪ್ರಧಾನಿ ಮತ್ತು ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಅವರು ಕಿಡಿ ಕಾರಿದರು. ರಾಮನ ಹೆಸರು ಹೇಳುವ ಬಿಜೆಪಿಯವರಿಗೆ ಸಾಮಾನ್ಯ ಜನರ ಕಷ್ಟ ಅರ್ಥ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!