ದೇಶದ ಎಲ್ಲರಿಗೂ ಉಚಿತ ಲಸಿಕೆ : ಪ್ರಧಾನಿ ಮೋದಿ ಘೋಷಣೆ

Prasthutha|

ನವದೆಹಲಿ : ಕೋವಿಡ್‌ ವಿರುದ್ಧದ ಹೋರಾಟಕ್ಕೆ ಕೇಂದ್ರ ಸರಕಾರ ಈಗ ಲಸಿಕೆ ವಿತರಣೆಗೆ ʼಮಿಷನ್‌ ಇಂದ್ರಧನುಷ್‌ʼ ಆರಂಭಿಸಲು ನಿರ್ಧರಿಸಿದೆ. ಆ ಮೂಲಕ ದೇಶದ ಎಲ್ಲರಿಗೂ ಉಚಿತ ಲಸಿಕೆ ನೀಡಲು ಕೇಂದ್ರ ನಿರ್ಧರಿಸಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಸಂಜೆ ಮಾಡಿದ ತಮ್ಮ ಭಾಷಣದಲ್ಲಿ ಪ್ರಕಟಿಸಿದ್ದಾರೆ.

- Advertisement -

ಕೆಲ ರಾಜ್ಯಗಳಿಂದ ಲಸಿಕೆ ವಿತರಣೆ ಕೆಲಸ ವಿಕೇಂದ್ರೀಕರಣಕ್ಕೆ ಒತ್ತಾಯ ಕೇಳಿ ಬಂದಿದೆ. ರಾಜ್ಯಗಳಿಗೆ ಈಗ ಸಮಸ್ಯೆ ಏನೆಂದು ಅರ್ಥವಾಗಿದೆ. ಇನ್ನು ಮುಂದೆ ಕೇಂದ್ರ ಸರಕಾರವೇ ರಾಜ್ಯಗಳಿಗೆ ಉಚಿತವಾಗಿ ಲಸಿಕೆ ಪೂರೈಸಲಿದೆ ಎಂದು ಅವರು ಹೇಳಿದ್ದಾರೆ.

ಮುಂದಿನ ಎರಡು ವಾರಗಳ ನಂತರ ಕೇಂದ್ರವು ಹದಿನೆಂಟು ವರ್ಷಗಳಿಗಿಂತ ಮೇಲಿನ ವಯಸ್ಸಿನವರಿಗೆ ಎಲ್ಲರಿಗೂ ಉಚಿತ ಲಸಿಕೆ ನೀಡಲಿದೆ. ಮುಂದಿನ ಎರಡು ವಾರಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸೇರಿಕೊಂಡು ಹೊಸ ಮಾರ್ಗಸೂಚಿ ಅನುಸರಿಸಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Join Whatsapp