Home ಟಾಪ್ ಸುದ್ದಿಗಳು ಮಂತ್ರಾಲಯ ಮಠದಲ್ಲಿ ಅರ್ಚಕರ ಗೋಲ್ಮಾಲ್: ಆನ್ ಲೈನ್ ನಲ್ಲಿ ಪೂಜೆ, ಪರಿಮಳವೇ ಪ್ರಸಾದ!

ಮಂತ್ರಾಲಯ ಮಠದಲ್ಲಿ ಅರ್ಚಕರ ಗೋಲ್ಮಾಲ್: ಆನ್ ಲೈನ್ ನಲ್ಲಿ ಪೂಜೆ, ಪರಿಮಳವೇ ಪ್ರಸಾದ!

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಪರಿಮಳ ಪ್ರಸಾದ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿ ನೆರವಿನ ನೆಪದಲ್ಲಿ ಅರ್ಚಕರು ಭಕ್ತರಿಗೆ ವಂಚನೆ ಮಾಡುತ್ತಿದ್ದಾರೆ.

ಇತ್ತೀಚೆಗೆ ರಾಜ್ಯದಲ್ಲಿ ದೇವಸ್ಥಾನದ ಅರ್ಚಕರಿಂದಲೇ ಭಕ್ತರಿಗೆ ವಂಚನೆ ನಡೆಯುತ್ತಿದೆ. ಈ ಹಿಂದೆ ಕಲಬುರುಗಿಯಲ್ಲೂ ಅರ್ಚಕರು ನಕಲಿ ವೆಬ್ ಸೈಟ್ ಸೃಷ್ಟಿ ಮಾಡಿ ಭಕ್ತರಿಂದ ಕೋಟಿ ಕೋಟಿ‌ ಲೂಟಿ ಮಾಡಿದ್ದು ಅರ್ಚಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಇದೀಗ ರಾಯಚೂರಿನಲ್ಲಿ, ಕೋವಿಡ್ ನಂತರ ಅರ್ಚಕರು, ಬಡವರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ನಂಬಿಸಿ ನಕಲಿ ವೆಬ್‍ಸೈಟ್ ಸೃಷ್ಟಿಸಿ, ನೆರವಿಗಾಗಿ ಹಣ ಹಾಕುವಂತೆ ಮನವಿ ಮಾಡಿ ನೆರವು ಪಡೆಯಲಾಗುತ್ತಿದೆ. ಮಂತ್ರಾಲಯ ಮಠದ ಅಭಿವೃದ್ಧಿಗಾಗಿ ಭಕ್ತರು ಫೋನ್ ಪೇ ಮಾಡುವಂತೆ ವಾಟ್ಸ್‌ಆ್ಯಪ್ ಗ್ರೂಪ್‍ಗಳಲ್ಲೂ ಸಂದೇಶ ಹರಿಬಿಡಲಾಗಿದೆ.

ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ಮಂತ್ರಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ ಎಂದು ಶ್ರೀಮಠದ ವ್ಯವಸ್ಥಾಪಕ ಶ್ರೀನಿವಾಸರಾವ್ ತಿಳಿಸಿದ್ದಾರೆ.

Join Whatsapp
Exit mobile version