Home ಟಾಪ್ ಸುದ್ದಿಗಳು ಅಲೆಕ್ಸಿ ನವಾಲ್ನಿಯ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾರಣಕ್ಕಾಗಿ ಪಾದ್ರಿ 3 ವರ್ಷ ಧಾರ್ಮಿಕ ಕರ್ತವ್ಯದಿಂದ...

ಅಲೆಕ್ಸಿ ನವಾಲ್ನಿಯ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾರಣಕ್ಕಾಗಿ ಪಾದ್ರಿ 3 ವರ್ಷ ಧಾರ್ಮಿಕ ಕರ್ತವ್ಯದಿಂದ ಅಮಾನತು

ಮಸ್ಕೋ: ರಷ್ಯಾ ಅಧ್ಯಕ್ಷ ಪುಟಿನ್ ಕಠಿಣ ವಿರೋಧಿಯಾಗಿದ್ದ, ಕಳೆದ ಫೆಬ್ರವರಿಯಲ್ಲಿ ಜೈಲಿನಲ್ಲಿ ಮೃತಪಟ್ಟಿದ್ದ ರಷ್ಯಾದ ವಿರೋಧ ಪಕ್ಷದ ಮುಖಂಡರೂ ಆಗಿದ್ದ ಅಲೆಕ್ಸಿ ನವಾಲ್ನಿಯ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾರಣಕ್ಕಾಗಿ ಆರ್ಥಡಾಕ್ಸ್ ಚರ್ಚ್‍ನ ಫಾದ್ರಿಯನ್ನು 3 ವರ್ಷ ಧಾರ್ಮಿಕ ಕರ್ತವ್ಯದಿಂದ ಅಮಾನತುಗೊಳಿಸಿರುವುದಾಗಿ ರಷ್ಯಾ ಆರ್ಥಡಾಕ್ಸ್ ಚರ್ಚ್‍ನ ಮಾಸ್ಕೋ ಧರ್ಮಪ್ರಾಂತ್ಯ ಹೇಳಿದೆ.

ಪಾದ್ರಿ ಡಿಮಿಟ್ರಿ ಸಫ್ರೊನೊವ್‍ರಿಗೆ ಸಂಕಷ್ಟ ಎದುರಾಗಿದ್ದು, ಆಶೀರ್ವಚನ ನೀಡುವ ಕಾರ್ಯದಿಂದ ಮತ್ತು ಚರ್ಚ್ ಪಾದ್ರಿಯ ಕ್ರಾಸ್ ಧರಿಸುವುದಕ್ಕೆ 2027ರವರೆಗೆ ಅವರಿಗೆ ನಿರ್ಬಂಧಿಸಲಾಗಿದೆ. ಜೊತೆಗೆ ಅವರನ್ನು ಮಾಸ್ಕೋದ ಮತ್ತೊಂದು ಚರ್ಚ್‍ಗೆ ವರ್ಗಾಯಿಸಿದ್ದು ಬೇರೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಈ ಅಮಾನತು ಅವಧಿಯಲ್ಲಿ ಅವರ ವರ್ತನೆಯನ್ನು ಆಧರಿಸಿ ಪಾದ್ರಿಯ ಸ್ಥಾನಮಾನ ಮರುಸ್ಥಾಪಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಧರ್ಮಪ್ರಾಂತ್ಯದ ಹೇಳಿಕೆ ತಿಳಿಸಿದೆ.

Join Whatsapp
Exit mobile version