Home ಕರಾವಳಿ ಕರಾವಳಿಯಲ್ಲಿ ಕೋಳಿ ಮಾಂಸ, ಮೊಟ್ಟೆ ಬೆಲೆ ಭಾರೀ ಇಳಿಕೆ

ಕರಾವಳಿಯಲ್ಲಿ ಕೋಳಿ ಮಾಂಸ, ಮೊಟ್ಟೆ ಬೆಲೆ ಭಾರೀ ಇಳಿಕೆ

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ 10 ದಿನಗಳ ಹಿಂದೆ ಗಗನಕ್ಕೇರಿದ್ದ ಕೋಳಿ ಮಾಂಸ ಹಾಗೂ ಮೊಟ್ಟೆ ದರ ಭಾರಿ ಇಳಿಕೆ ಕಂಡಿದ್ದು, ಮಾಂಸ ಪ್ರಿಯರು ಖುಷಿ ಪಡುವಂತಾಗಿದೆ.


10 ದಿನಗಳ ಹಿಂದೆ ಮಾರುಕಟ್ಟೆಯಲ್ಲಿ ಬ್ರಾಯ್ಲರ್ ಕೋಳಿ ಮಾಂಸ ಸ್ಕಿನ್ ಲೆಸ್ ಕೆಜಿಗೆ 240 ರೂ. ಇತ್ತು. ವಿತ್ ಸ್ಕಿನ್ ಕೆ.ಜಿ.ಗೆ 220 ರೂ. ಹಾಗೂ ಜೀವಂತ ಕೋಳಿ 180 ರೂ. ವರೆಗೆ ಇತ್ತು.


ಜು. 24ರಂದು ಸ್ಕಿನ್ ಲೆಸ್ ಕೆಜಿಗೆ 155 ರೂ. ಇದ್ದರೆ ವಿತ್ ಸ್ಕಿನ್ 135 ರೂ. ಆಸುಪಾಸಿನಲ್ಲಿದೆ. ಇನ್ನು 6.50 ರೂ.ಗೆ ಮಾರಾಟವಾಗುತ್ತಿದ್ದ ಮೊಟ್ಟೆ ದರವೂ ಇಳಿದಿದ್ದು 5.50 ರೂ.ಗೆ ಇಳಿದಿದೆ.
ಈ ವಾರದಲ್ಲಿ ಮತ್ತಷ್ಟು ಕುಸಿಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

Join Whatsapp
Exit mobile version