Home ಟಾಪ್ ಸುದ್ದಿಗಳು ರಾಜ್ಯದ 21 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ರಾಜ್ಯದ 21 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

► ಮಂಗಳೂರಿನ ಎಎಸ್ಐ ಮೋಹನ್ ಗೆ ಪ್ರಶಸ್ತಿ

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ತೋರಿದ ಅತ್ಯುತ್ತಮ ಸೇವೆಗಾಗಿ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ನೀಡುವ ರಾಷ್ಟ್ರಪತಿಗಳ ಪೊಲೀಸ್ ಪದಕಕ್ಕೆ ರಾಜ್ಯದ ಇಬ್ಬರು ಪೊಲೀಸ್ ಅಧಿಕಾರಿಗಳು ಹಾಗೂ 19 ಮಂದಿ ಪೊಲೀಸ್ ಸಿಬ್ಬಂದಿ ಶ್ಲಾಘನೀಯ ಸೇವಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಂಗಳೂರು ಸಿಐಡಿ ಎಡಿಜಿಪಿ ಉಮೇಶ್ ಕುಮಾರ್, ಬೆಂಗಳೂರು ಐಎಸ್ ಡಿ ಎಡಿಜಿಪಿ ಅರುಣ್ ಚಕ್ರವರ್ತಿ ಅವರಿಗೆ ರಾಷ್ಟ್ರಪತಿ ಪದಕ ನೀಡಲಾಗಿದೆ.


ಉಳಿದಂತೆ ಬೆಂಗಳೂರು ಕೆಎಸ್ ಆರ್ ಪಿ 3ನೇ ಬೆಟಾಲಿಯನ್ ಕಮಾಂಡೆಂಟ್ ಎಂ.ವಿ. ರಾಮಕೃಷ್ಣ ಪ್ರಸಾದ್, ಮಲ್ಲೇಶ್ವರ ಎಸಿಪಿ ವೆಂಕಟೇಶ್ ನಾಯ್ಡು ಕೆ.ಎಸ್., ಚಿಕ್ಕಪೇಟೆ ಎಸಿಪಿ ರವಿ ಪಿ, ಡಿಎಸ್ ಎಸ್ ಪಿ ನವೀನ್ ಕುಲಕರ್ಣಿ, ಬೆಂಗಳೂರು ತಲಘಟ್ಟಪುರ ಪಿಐ ಸಿದ್ದರಾಜು ಜಿ, ಎಸಿಬಿ ಪಿಐ ಎಂ.ಜೆ.ದಯಾನಂದ, ಕಲಬುರಗಿ ಗ್ರಾಮಾಂತರ ಸಿಪಿಐ ಶಂಕರಗೌಡ ಪಾಟೀಲ್, ಬೆಳಗಾವಿ ಕೆಎಸ್ ಆರ್ ಪಿ ಆರ್ ಎಸ್ ಐ ಎಸ್.ಬಿ.ಮಳಗಿ, ಬೆಂಗಳೂರು ಗುಪ್ತಚರ ಡಬ್ಲ್ಯುಪಿಎಸ್ಐ ಎಸ್.ಇ.ಗೀತಾ, ಕೆಎಸ್ ಆರ್ ಪಿ ಎಆರ್ ಎಸ್ ಐ ಡಿ.ಎಸ್. ಗೋವರ್ದನ ರಾವ್, ಮಂಗಳೂರು ಸೈಬರ್ ಕ್ರೈಂ ಎಎಸ್ಐ ಮೋಹನ, ಬೆಂಗಳೂರು ವಯರ್ ಲೆಸ್ ಎಎಸ್ ಐ ರಾಮ ನಾಯ್ಕ್, ತುಮಕೂರು ಜಯನಗರ ಸಿಎಚ್ ಸಿ ಮುಹಮ್ಮದ್ ಮುನವ್ವರ್ ಪಾಷ, ಕೆಎಸ್ ಆರ್ ಪಿ ಸ್ಪೆಷಲ್ ಆರ್ ಎಚ್ ಸಿ ಎಸ್.ಪಿ.ಕೆರುಟಗಿ, ಬಳ್ಳಾರಿ ಡಿಎಆರ್ ಎಎಚ್ ಸಿ ಬಿ.ಎಸ್. ದಾದಾ ಅಮೀರ್, ಯಲಹಂಕ ಎಪಿಟಿಎಸ್ ಎಎಎಚ್ ಸಿ ವಿ.ಸೋಮಶೇಖರ್, ಚಿಕ್ಕಮಗಳೂರು ಕಂಪ್ಯೂಟರ್ ವಿಭಾಗದ ಸಿಎಚ್ ಸಿ ಆರ್. ಕುಮಾರ್, ಕೆಎಸ್ ಆರ್ ಪಿ ಬೆಂಗಳೂರು ಸ್ಪೆಷನ್ಲ್ ಆರ್ ಎಚ್ ಸಿ ಸಯ್ಯದ್ ಅಬ್ದುಲ್ ಖಾದರ್, ಹುಬ್ಬಳ್ಳಿ-ಧಾರವಾಡ ನಗರ ಸಿಸಿಆರ್ ಬಿ. ಸಿಎಚ್ ಸಿ ಗೋಪಾಲಪ್ಪ ದೇವೇಂದ್ರಪ್ಪ ಕೊಟಬಗಿ ಅವರಿಗೆ ಶ್ಲಾಘನೀಯ ಸೇವಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Join Whatsapp
Exit mobile version