ರಾಷ್ಟ್ರಪತಿ ಚುನಾವಣೆ: ಜೂನ್ 27ರಂದು ಯಶವಂತ್ ಸಿನ್ಹಾ ನಾಮಪತ್ರ ಸಲ್ಲಿಕೆ

Prasthutha|

ನವದೆಹಲಿ: ಮಾಜಿ ಕೇಂದ್ರ ಸಚಿವ ಮತ್ತು ರಾಷ್ಟ್ರಪತಿ ಚುನಾವಣೆಗೆ ಜಂಟಿ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಜೂನ್ 27 ರಂದು ಸಂಸತ್ತಿನಲ್ಲಿ ಐದು ಸೆಟ್ ನಾಮಪತ್ರಗಳೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ.

- Advertisement -

ಮಾಧ್ಯಮದ ಜೊತೆ ಮಾತನಾಡಿದ ಕೇರಳದ ಆರ್ ಎಸ್ಪಿ ಲೋಕಸಭಾ ಸಂಸದ ಎನ್.ಕೆ.ಪ್ರೇಮಚಂದ್ರನ್, “ಜೂನ್ 27 ರಂದು ಬೆಳಿಗ್ಗೆ 11.30 ಕ್ಕೆ ನಾಮಪತ್ರ ಸಲ್ಲಿಸಲು ನಾವು ಈಗಾಗಲೇ ನಿರ್ಧರಿಸಿದ್ದೇವೆ. ಅವರು ನಾಮಪತ್ರ ಸಲ್ಲಿಸಲಿದ್ದು, ಇದಕ್ಕೆ ಎಲ್ಲ ವಿರೋಧ ಪಕ್ಷಗಳ ಬೆಂಬಲವೂ ಇದೆ’ ಎಂದು ಹೇಳಿದ್ದಾರೆ.



Join Whatsapp