Home ಟಾಪ್ ಸುದ್ದಿಗಳು ಪೀಣ್ಯಾ ಕೈಗಾರಿಕಾ ಸಂಘದ ಅಧ್ಯಕ್ಷರಾಗಿ ಆರ್. ಮಂಜುನಾಥ್, ಉಪಾಧ್ಯಕ್ಷರಾಗಿ ಆರ್. ಶಿವಕುಮಾರ್ ಆಯ್ಕೆ

ಪೀಣ್ಯಾ ಕೈಗಾರಿಕಾ ಸಂಘದ ಅಧ್ಯಕ್ಷರಾಗಿ ಆರ್. ಮಂಜುನಾಥ್, ಉಪಾಧ್ಯಕ್ಷರಾಗಿ ಆರ್. ಶಿವಕುಮಾರ್ ಆಯ್ಕೆ

ಬೆಂಗಳೂರು:  ಪೀಣ್ಯ ಕೈಗಾರಿಕಾ ಸಂಘದ 44 ನೇ ಅಧ್ಯಕ್ಷರಾಗಿ ಎಚ್. ಮಂಜುನಾಥ್, ಹಿರಿಯ ಉಪಾಧ್ಯಕ್ಷರಾಗಿ ಎಚ್.ಎಂ. ಆರೀಫ್ ಹಾಗೂ ಉಪಾಧ್ಯಕ್ಷರಾಗಿ ಆರ್. ಶಿವಕುಮಾರ್ ಆಯ್ಕೆಯಾಗಿದ್ದಾರೆ.

ಪೀಣ್ಯ ಕೈಗಾರಿಕಾ ಸಂಘದ ಸಭಾಂಗಣದಲ್ಲು ಸರ್ವ ಸದಸ್ಯರ ಸಭೆಯಲ್ಲಿ 2022 – 23 ಸಾಲಿಗೆ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದು, ನಿಕಟಪೂರ್ವ ಅಧ್ಯಕ್ಷರಾಗಿ ಬಿ ಮುರಳಿಕೃಷ್ಣ ಇರಲಿದ್ದಾರೆ.

ಗೌರವ ಕಾರ್ಯದರ್ಶಿಯಾಗಿ ಎಂ. ಚಂದ್ರಶೇಖರ್, ಜಂಟಿ ಕಾರ್ಯದರ್ಶಿ ಎಚ್.ಕೆ. ಮಲ್ಲೇಶ್ ಗೌಡ, ಖಜಾಂಚಿ ಬಿ.ಸಿ. ತಿಪ್ಪೇಶಪ್ಪ, ಜಂಟಿ ಖಜಾಂಚಿಯಾಗಿ ರಮೇಶ್ ಎಚ್.ಜಿ. ಆಯ್ಕೆಯಾಗಿದ್ದಾರೆ.   

 ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ನಂತರ ಮಾತನಾಡಿದ ಮಂಜುನಾಥ್,ಪೀಣ್ಯ ಕೈಗಾರಿಕಾ ಸಂಘದಿಂದ ವೃತ್ತಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಮಾಡಬೇಕು, ಪೀಣ್ಯ ಕೈಗಾರಿಕಾ ಪ್ರದೇಶಕ್ಕಾಗಿಯೇ ಪ್ರತ್ಯೇಕ ಆರೋಗ್ಯ ಕೇಂದ್ರ ರಚಿಸಿ ಆಂಬುಲೆನ್ಸ್ ಸೇವೆ ಶುರು ಮಾಡುವ, ಕಾರ್ಮಿಕರ ಮಕ್ಕಳಿಗಾಗಿ ಚೈಲ್ಡ್ ಕೇರ್ ಸೆಂಟರ್ ರಚನೆ ಹಾಗೂ ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಪ್ರದೇಶದ ಮಾದರಿಯಲ್ಲಿ ಪೀಣ್ಯ ಇಂಡಸ್ಟ್ರಿಯಲ್ ಟೌನ್ ಶಿಪ್ ಮಾಡಬೇಕೆಂಬುದು ನಮ್ಮ ತಂಡದ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದರು.

Join Whatsapp
Exit mobile version