ಕೋವಿಡ್‌ ಮುಗಿಯದು, ಹೊಸ ಅಲೆಗಳನ್ನು ಎದುರಿಸಲು ಸಜ್ಜಾಗಿ: WHO

Prasthutha|

ಜಿನಿವಾ: ಏಷ್ಯಾ-ಪೆಸಿಫಿಕ್ ದೇಶಗಳು ಆರೋಗ್ಯ ಸೇವೆಗಳನ್ನು ಬಲಪಡಿಸುವ ಅಗತ್ಯವಿದೆ. ಒಮಿಕ್ರಾನ್ ರೂಪಾಂತರವು ಜಾಗತಿಕವಾಗಿ ಹರಡುತ್ತಿದೆ. ಹೀಗಾಗಿ ಜನರಿಗೆ ಲಸಿಕೆ ಹಾಕುವತ್ತ ದೇಶಗಳು ಗಮನ ಹರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

- Advertisement -

ವಿಶ್ವ ಆರೋಗ್ಯ ಸಂಸ್ಥೆಯ ಪಶ್ಚಿಮ ಪೆಸಿಫಿಕ್‌ನ ಪ್ರಾದೇಶಿಕ ನಿರ್ದೇಶಕ ತಕೇಶಿ ಕಸಾಯಿ ಮಾಧ್ಯಮಗಳೊಂದಿಗೆ ಮಾತನಾಡಿ, ‘ಸಾಂಕ್ರಾಮಿಕ ರೋಗವು ಇಲ್ಲಿಗೇ ಮುಗಿಯುವಂಥದ್ದಲ್ಲ,’ ಎಂದು ಕಳವಳ ವ್ಯಕ್ತಪಡಿಸಿದರು.

‘ಜನರು ಒಮಿಕ್ರಾನ್ ಬಗ್ಗೆ ಚಿಂತಿತರಾಗಿದ್ದಾರೆಂದು ನನಗೆ ತಿಳಿದಿದೆ.  ಭವಿಷ್ಯದಲ್ಲಿ ಎದುರಾಗಬಹುದಾದ ಅಲೆಗಳನ್ನು ಎದುರಿಸಲು ಮತ್ತು ಅದರಿಂದಾಗುವ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ಪರಿಣಾಮವನ್ನು ತಗ್ಗಿಸುವ ವಿಧಾನವನ್ನು ನಾವು ಕಲಿತುಕೊಳ್ಳಬೇಕು ” ಎಂದು ಅವರು ಹೇಳಿದರು.

Join Whatsapp