Home ಟಾಪ್ ಸುದ್ದಿಗಳು ಯುಪಿಎಸ್ ಸಿ ನೂತನ ಅಧ್ಯಕ್ಷೆಯಾಗಿ ಪ್ರೀತಿ ಸೂದನ್ ಆಯ್ಕೆ

ಯುಪಿಎಸ್ ಸಿ ನೂತನ ಅಧ್ಯಕ್ಷೆಯಾಗಿ ಪ್ರೀತಿ ಸೂದನ್ ಆಯ್ಕೆ

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ ಸಿ) ನೂತನ ಅಧ್ಯಕ್ಷರಾಗಿ ಪ್ರೀತಿ ಸೂದನ್ ಆಯ್ಕೆಯಾಗಿದ್ದು, ಆಗಸ್ಟ್ 1 ರಂದು ಅಧಿಕಾರ ಸ್ವೀಕರಿಸಲಿದ್ದಾರೆ.


1983ರ ಬ್ಯಾಚ್ ನ ಐಎಎಸ್ ಅಧಿಕಾರಿ ಪ್ರೀತಿ ಸೂದನ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಟ್ರೈನಿ ಐಎಎಸ್ ಪೂಜಾ ಖೇಡ್ಕರ್ ವಿವಾದದ ಸಂದರ್ಭದಲ್ಲಿ ಯುಪಿಎಸ್ ಸಿ ಮಾಜಿ ಅಧ್ಯಕ್ಷ ಮನೋಜ್ ಸೋನಿ ರಾಜೀನಾಮೆ ನೀಡಿದ ನಂತರ ಈ ಹುದ್ದೆ ಖಾಲಿಯಾಗಿತ್ತು.


ಪ್ರೀತಿ ಆಂಧ್ರಪ್ರದೇಶ ಕೇಡರ್ ನ ಐಎಎಸ್ ಅಧಿಕಾರಿ. ಅವರು ಆಹಾರ ಸಂಸ್ಕರಣೆ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ರಕ್ಷಣಾ ಸಚಿವಾಲಯದಲ್ಲಿಯೂ ಕೆಲಸ ಮಾಡಿದ್ದಾರೆ.

Join Whatsapp
Exit mobile version