Home ಟಾಪ್ ಸುದ್ದಿಗಳು ಉಡುಪಿ ಹತ್ಯಾಕಾಂಡ: ದಾರಿ ಮಧ್ಯೆ ರಕ್ತಸಿಕ್ತ ಬಟ್ಟೆ ಸುಟ್ಟು ಹಾಕಿದ ನರಹಂತಕ ಪ್ರವೀಣ್ ಚೌಗುಲೆ!

ಉಡುಪಿ ಹತ್ಯಾಕಾಂಡ: ದಾರಿ ಮಧ್ಯೆ ರಕ್ತಸಿಕ್ತ ಬಟ್ಟೆ ಸುಟ್ಟು ಹಾಕಿದ ನರಹಂತಕ ಪ್ರವೀಣ್ ಚೌಗುಲೆ!

ಉಡುಪಿ: ನೇಜಾರುವಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ ಪ್ರವೀಣ್ ಅರುಣ್ ಚೌಗುಲೆ ಕೃತ್ಯ ನಡೆಸಿ ರಕ್ತಸಿಕ್ತ ಬಟ್ಟೆಯಲ್ಲೇ ಸ್ಥಳದಿಂದ ಪರಾರಿಯಾಗಿದ್ದು, ಆ ಬಟ್ಟೆಯನ್ನು ಮಂಗಳೂರು ತೆರಳುವ ಮಾರ್ಗ ಮಧ್ಯೆ ಸುಟ್ಟು ಹಾಕಿ ಸಾಕ್ಷ್ಯನಾಶ ನಡೆಸಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.


ಆದರೆ ಅದರ ಕುರುಹು ಇನ್ನೂ ಪೊಲೀಸರಿಗೆ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.


ಕೊಲೆ ಮಾಡುವ ಮೊದಲು ಹೆಜಮಾಡಿ ಟೋಲ್ ನಿಂದ ಆಚೆಗೆ ಕಾರು ನಿಲ್ಲಿಸಿದ್ದ ಆರೋಪಿ ಪ್ರವೀಣ್, ನಂತರ ನೇಜಾರುವಿನಿಂದ ಪರಾರಿಯಾಗಿದ್ದು, ಸಾಕ್ಷ್ಯನಾಶ ಪಡಿಸಲು ಮಂಗಳೂರಿಗೆ ತೆರಳುವ ಮುನ್ನವೇ ಸುರಕ್ಷಿತ ಜಾಗ ನೋಡಿ ಕೃತ್ಯದ ವೇಳೆ ರಕ್ತಸಿಕ್ತವಾದ ಬಟ್ಟೆಯನ್ನು ಬಿಚ್ಚಿ ಸುಟ್ಟು ಹಾಕಿದ್ದ ಕುರಿತು ಪೊಲೀಸರಲ್ಲಿ ಹೇಳಿದ್ದಾನೆ ಎಂದು ಬಾಯ್ಬಿಟ್ಟಿದ್ದಾನೆ.

Join Whatsapp
Exit mobile version