Home ಟಾಪ್ ಸುದ್ದಿಗಳು ಪ್ರವೀಣ್ ನೆಟ್ಟಾರು ಪತ್ನಿಗೆ ಬಿಜೆಪಿಯಿಂದ ಮೋಸ: ರಾಮಲಿಂಗಾರೆಡ್ಡಿ

ಪ್ರವೀಣ್ ನೆಟ್ಟಾರು ಪತ್ನಿಗೆ ಬಿಜೆಪಿಯಿಂದ ಮೋಸ: ರಾಮಲಿಂಗಾರೆಡ್ಡಿ

ಬೆಂಗಳೂರು : ಬಿಜೆಪಿ ಸರ್ಕಾರವು ಪ್ರವೀಣ್ ನೆಟ್ಟಾರು ಪತ್ನಿಗೆ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡಿತ್ತು, ಈ ಮೂಲಕ ಅವರಿಗೆ ಮೋಸ ಮಾಡಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.


ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಸರ್ಕಾರಿ ಉದ್ಯೋಗವನ್ನು ಅನುಕಂಪದ ಆಧಾರದಲ್ಲಿ ಪಡೆದಿದ್ದ ಪತ್ನಿ ನೂತನಾ ಕುಮಾರಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಈ ವಿಚಾರವಾಗಿ ಇಂದು ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಬಿಜೆಪಿ ಸರ್ಕಾರವು ನೂತನಾ ಕುಮಾರಿಗೆ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡಿತ್ತು, ಈ ಮೂಲಕ ಅವರಿಗೆ ಮೋಸ ಮಾಡಿದೆ. ಹೊಸ ಸರ್ಕಾರ ಬಂದಮೇಲೆ ಪ್ರವೀಣ್ ನೆಟ್ಟಾರು ಪತ್ನಿ ಕೆಲಸ ಹೋಯ್ತು ಎನ್ನುವ ಮುನ್ನ ಅವರಿಗೆ ತಾತ್ಕಾಲಿಕ ಹುದ್ದೆ ಯಾಕೆ ನೀಡಿತ್ತು ಎಂದು ಪ್ರಶ್ನಿಸಿದ್ದಾರೆ.


ಸಿಎಂ ಬೊಮ್ಮಾಯಿ ವಿಶೇಷ ಅಧಿಕಾರವನ್ನು ಬಳಸಿ ಖಾಯಂ ಹುದ್ದೆಯನ್ನೇ ನೂತನಾರಿಗೆ ನೀಡಬಹುದಿತ್ತು ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

Join Whatsapp
Exit mobile version