Home ಟಾಪ್ ಸುದ್ದಿಗಳು ‘ಪ್ರಸ್ತುತ‌’ ಪ್ರಧಾನ ಸಂಪಾದಕರಾಗಿ ಅಬ್ದುಲ್ ರಝಾಕ್‌ ಕೆಮ್ಮಾರ ನೇಮಕ

‘ಪ್ರಸ್ತುತ‌’ ಪ್ರಧಾನ ಸಂಪಾದಕರಾಗಿ ಅಬ್ದುಲ್ ರಝಾಕ್‌ ಕೆಮ್ಮಾರ ನೇಮಕ

ಮಂಗಳೂರು : ‘ಪ್ರಸ್ತುತ‌’ ಪಾಕ್ಷಿಕದ‌ ನೂತನ ಪ್ರಧಾನ ಸಂಪಾದಕರಾಗಿ ಅಬ್ದುಲ್ ರಝಾಕ್ ಕೆಮ್ಮಾರ ಆಯ್ಕೆಯಾಗಿದ್ದಾರೆ. ಕೆ.ಎಂ.ಶರೀಫ್ ರವರ ನಿಧನದದಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಈ ನೇಮಕಾತಿ ನಡೆದಿದೆ.

ಪತ್ರಿಕೆಯ ಪ್ರಾರಂಭ ಕಾಲದಿಂದಲೂ ಸಂಪಾದಕೀಯ ಮಂಡಳಿ ಸದಸ್ಯರಾಗಿರುವ ಇವರು, ಪ್ರಸ್ತುತದಲ್ಲಿ ಉಪ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಅಬ್ದುಲ್ ರಝಾಕ್ ಕೆಮ್ಮಾರ, ಕವಿ ಮತ್ತು ಉತ್ತಮ ಬರಹಗಾರರೂ ಆಗಿದ್ದಾರೆ.

ಮಾತ್ರವಲ್ಲದೆ, ಅವರು ಈಗಾಗಲೇ ಹಲವು ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಓರ್ವ ಪತ್ರಕರ್ತರಾಗಿದ್ದುಕೊಂಡು ಅವರು ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲೂ ಕ್ರಿಯಾಶೀಲರಾಗಿದ್ದಾರೆ.

Join Whatsapp
Exit mobile version