Home ಟಾಪ್ ಸುದ್ದಿಗಳು ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ: ಅವರಿಗೆ ರಕ್ಷಣೆ ಕೊಡುವ ಅಗತ್ಯವಿಲ್ಲವೆಂದ ಪ್ರಮೋದ್ ಮುತಾಲಿಕ್

ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ: ಅವರಿಗೆ ರಕ್ಷಣೆ ಕೊಡುವ ಅಗತ್ಯವಿಲ್ಲವೆಂದ ಪ್ರಮೋದ್ ಮುತಾಲಿಕ್

ಹುಬ್ಬಳ್ಳಿ: ಬೆದರಿಕೆ ಪತ್ರ ಬಂದಿರುವ ಸಾಹಿತಿಗಳು ಹಾಗೂ ಬುದ್ದಿ ಜೀವಿಗಳಿಗೆ ರಕ್ಷಣೆ ಕೊಡುವ ಅಗತ್ಯವಿಲ್ಲವೆಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.


ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಇವರಿಗೆ ರಕ್ಷಣೆ ನೆನಪಾಗುತ್ತೆ. ಬುದ್ಧಿಜೀವಿಗಳು ಹಸಿ ಸುಳ್ಳು ಹೇಳುತ್ತಿದ್ದಾರೆ. ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಅವಶ್ಯಕತೆ ಇಲ್ಲ ಎಂದರು.


ಸರ್ಕಾರಿ ಸೌಲಭ್ಯ ಪಡೆಯಲು ಬುದ್ಧಿಜೀವಿಗಳು ರಕ್ಷಣೆ ಕೇಳಿದ್ದಾರೆ. ಇದು ಬುದ್ದಿಜೀವಿಗಳ ನಿರ್ಲಜ್ಜತನ. ಯಾವುದೇ ಬುದ್ದಿ ಜೀವಿಗಳಿಗೆ ರಕ್ಷಣೆ ಕೊಡೋ ಅವಶ್ಯಕತೆ ಇಲ್ಲ. ಅವರಿಗೆ ಯಾವುದೇ ಭಯ ಇಲ್ಲ ಎಂದರು.

Join Whatsapp
Exit mobile version