ಉಡುಪಿ: ಮಾರಕಾಸ್ತ್ರ ಇಟ್ಟು ಪ್ರಮೋದ್ ಮುತಾಲಿಕ್ ಆಯುಧ ಪೂಜೆ !

ಉಡುಪಿ: ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಉಡುಪಿಯಲ್ಲಿ ಮಾರಕಾಸ್ತ್ರಗಳನ್ನು ಇಟ್ಟು ಆಯುಧ ಪೂಜೆ ಮಾಡಿದ್ದಾರೆ.


ಶ್ರೀರಾಮಸೇನೆ ಪ್ರಾಂತ ಅಧ್ಯಕ್ಷರ ಮನೆಯಲ್ಲಿ ಮುತಾಲಿಕ್ ನೇತೃತ್ವದಲ್ಲಿ ಮಾರಕಾಸ್ತ್ರಗಳಿಗೆ ಪೂಜೆ ನೆರವೇರಿಸಿದ್ದಾರೆ.

- Advertisement -


ಪೂಜೆ ಬಳಿಕ ಮಾತನಾಡಿದ ಮುತಾಲಿಕ್ ಹಿಂದುತ್ವ ಮತ್ತು ಭಾರತದ ಉಳಿವಿಗಾಗಿ ಪೂಜೆ ಮಾಡಿದ್ದೇವೆ. ಎಲ್ಲರೂ ಇದೇ ಮಾದರಿಯಲ್ಲಿ ಆಯುಧ ಪೂಜೆ ಮಾಡಬೇಕು ಎಂದು ಹೇಳಿದ್ದಾರೆ.