Home ಟಾಪ್ ಸುದ್ದಿಗಳು ಪ್ರಲ್ಹಾದ್ ಜೋಶಿಯವರೇ, ನಿಮ್ಮ ಕುತಂತ್ರ ನಮ್ಮ ಮುಂದೆ ನಡೆಯುವುದಿಲ್ಲ: ದಿಂಗಾಲೇಶ್ವರ ಶ್ರೀ

ಪ್ರಲ್ಹಾದ್ ಜೋಶಿಯವರೇ, ನಿಮ್ಮ ಕುತಂತ್ರ ನಮ್ಮ ಮುಂದೆ ನಡೆಯುವುದಿಲ್ಲ: ದಿಂಗಾಲೇಶ್ವರ ಶ್ರೀ

ಬೆಂಗಳೂರು: ‘ಪ್ರಲ್ಹಾದ ಜೋಶಿಯವರ ಚೇಲಾಗಳು ಸಾಮಾಜಿಕ ಜಾಲತಾಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಜೋಶಿಯವರೇ, ನಿಮ್ಮ ಯಾವುದೇ ಕುತಂತ್ರ ನಮ್ಮ ಮುಂದೆ ನಡೆಯುವುದಿಲ್ಲ’ ಎಂದು ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿರುವ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.


ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಜೋಶಿಯವರ ದುರಾಡಳಿತ ಬಗ್ಗೆ ಹೈಕಮಾಂಡ್ ನಾಯಕರು ಗಮನಹರಿಸುತ್ತಿಲ್ಲ. ಅವರಿಗೆ ಅದೇ ಬೇಕಾಗಿದೆ ಅನಿಸುತ್ತೆ. ಹೀಗಾಗಿ ಈ ದಿಂಗಾಲೇಶ್ವರ ರಾಜಕೀಯ ಪ್ರವೇಶ ಮಾಡಬೇಕಾಯಿತು. ಸ್ಪರ್ಧೆ ಮಾಡುವಂತೆ ಮತದಾರರು ನನಗೆ ಒತ್ತಾಯ ಮಾಡಿದ್ದಾರೆ’ ಎಂದರು.

Join Whatsapp
Exit mobile version