ಕವರಟ್ಟಿ: ಲಕ್ಷದ್ವೀಪ ಆಡಳಿತದ ವಿರುದ್ಧದ ಪ್ರತಿಭಟನೆಗೆ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಪ್ರತಿಕ್ರಿಯೆ ನೀಡಿದ್ದು, ಕೇಂದ್ರಾಡಳಿತ ಪ್ರದೇಶವಾಗಿ ಲಕ್ಷದ್ವೀಪ ಸ್ವತಂತ್ರವಾಗಿದೆ, ದ್ವೀಪ ಆಡಳಿತದ ವಿರುದ್ಧದ ಪ್ರತಿಭಟನೆ ಕೇರಳದ ರಾಷ್ಟ್ರ ವಿರೋಧಿ ಶಕ್ತಿಗಳ ಸೃಷ್ಟಿಯಾಗಿದೆ ಎಂದು ಅವರು ಹೇಳಿದ್ದಾರೆ.
ದ್ವೀಪದ ಜನರಿಗೆ ಮಸೂದೆಯ ಬಗ್ಗೆ ಚೆನ್ನಾಗಿ ತಿಳಿದಿದ್ದು, ವಿರೋಧ ಅಥವಾ ಟೀಕೆಗಳಿದ್ದರೆ ತಿಳಿಸಲು ಅವರಿಗೆ ಸಮಯ ನೀಡಿದಾಗ, ಯಾರೂ ಪ್ರತಿಭಟಿಸಲು ಅಥವಾ ಪ್ರತಿಕ್ರಿಯಿಸಲು ದ್ವೀಪದ ಜನರು ಬರಲಿಲ್ಲ ಎಂದು ಪ್ರಫುಲ್ ಪಟೇಲ್ ಹೇಳಿದರು. ಲಕ್ಷದ್ವೀಪದ ಭೂ ಸಂಬಂಧಿತ ಕಾನೂನುಗಳನ್ನು ಬದಲಾಯಿಸಬೇಕಾಗಿರುವುದು ಮತ್ತು ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಬೇಕಾಗಿರುವುದು ದ್ವೀಪದ ಜನರು ಮತ್ತು ಚುನಾಯಿತ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿದ ನಂತರವಲ್ಲವೇ? ಎಂಬ ಪ್ರಶ್ನೆಗೆ ಪ್ರಫುಲ್ ಪಟೇಲ್ ಈ ರೀತಿ ಉತ್ತರ ನೀಡಿದ್ದಾರೆ.
ಲಕ್ಷದ್ವೀಪ ಆಡಳಿತದ ಆಡಳಿತ ಸುಧಾರಣೆಗಳ ವಿರುದ್ಧ ಭಾರಿ ಪ್ರತಿಭಟನೆ ನಡೆಯುತ್ತಿದ್ದು, ಯಾವುದೇ ಅಪರಾಧಗಳು ವರದಿಯಾಗದ ಲಕ್ಷದ್ವೀಪದಲ್ಲಿ ಗೂಂಡಾ ಕಾಯ್ದೆ ಜಾರಿ ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ಎಂದು ದ್ವೀಪದ ನಿವಾಸಿಗಳು ಆರೋಪಿಸಿದ್ದಾರೆ.