ವಿದ್ಯುತ್ ಬಿಲ್ ದುಪ್ಪಟ್ಟು ಬರುತ್ತಿರುವುದಕ್ಕೆ ಇಂಧನ ಸಚಿವ ಕೆಜೆ ಜಾರ್ಜ್ ಸ್ಪಷ್ಟನೆ

Prasthutha|

ಬೆಂಗಳೂರು: ಏಕಾಏಕಿ ವಿದ್ಯುತ್ ಬಿಲ್ ದುಪ್ಪಟ್ಟು ಬರುತ್ತಿರುವುದಕ್ಕೆ ಇಂಧನ ಸಚಿವ ಕೆಜೆ ಜಾರ್ಜ್ ಸ್ಪಷ್ಟನೆ ನೀಡಿದ್ದು, ಏಪ್ರಿಲ್, ಮೇ ತಿಂಗಳಿನ ಬಿಲ್ ಕಲೆಕ್ಟ್ ಮಾಡಲು ಹೇಳಿದ್ದಾರೆ. ಹೀಗಾಗಿ ಒಂದೇ ಬಾರಿ ಎರಡು ತಿಂಗಳ ವಿದ್ಯುತ್ ಏರಿಕೆ ಹಿನ್ನೆಲೆಯಲ್ಲಿ ಬಿಲ್ ಜಾಸ್ತಿ ಬರುತ್ತಿದೆ. ಇನ್ನು ಕೆಲವೆಡೆ ಮೀಟರ್ ಸಮಸ್ಯೆಯಿಂದ ವಿದ್ಯುತ್ ದರ ಹೆಚ್ಚಳ ಆಗಿದೆ. ನಮ್ಮ ಸಾಫ್ಟ್ವೇರ್ ಹಳೆಯದು, ಹೊಸ ಸಾಫ್ಟ್ವೇರ್ ಹಾಕಬೇಕು ಎಂದು ಸ್ಪಷ್ಟಪಡಿಸಿದರು.

- Advertisement -

ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ ಆಗಿದ್ದಕ್ಕೆ ಕಾರಣ ನಾವಲ್ಲ. ಹಿಂದಿನ ಸರ್ಕಾರವಿದ್ದಾಗ KERC ವಿದ್ಯುತ್ ದರ ಏರಿಕೆ ಮಾಡಿದೆ. ಕೆಲ ಮನೆಗಳಲ್ಲಿ ಮೀಟರ್ ಪ್ರಾಬ್ಲಮ್ ಆಗಿದೆ. ಒಂದೇ ಬಾರಿ ಎರಡು ತಿಂಗಳಗಳ ಬಿಲ್ ಬಂದಿದೆ. ನಮ್ಮ ಸರ್ಕಾರದಿಂದ ಪ್ರಾಬ್ಲಮ್ ಆಗಿಲ್ಲ. ನಮ್ಮ ಸಾಫ್ಟವೇರ್ ಕೂಡ 12 ವರ್ಷ ಹಳೆಯದು. ತಕ್ಷಣ ಬದಲಾವಣೆ ಮಾಡುವುದು ಕಷ್ಟ. ಕೊಪ್ಪಳದಲ್ಲೂ ಕೂಡ ಇದೇ ಸಮಸ್ಯೆ ಆಗಿದೆ. ಕೊಪ್ಪಳದ ಅಜ್ಜಿ ಮನೆಗೆ 1 ಲಕ್ಷ ರೂ. ಕರೆಂಟ್ ಬಿಲ್ ಬಂದಿದೆ ಮೀಟರ್ ಬಿಲ್ ಸಮಸ್ಯೆಯಿಂದ ಬಿಲ್ ಹೆಚ್ಚಿಗೆ ಬಂದಿದೆ. ಆ ಅಜ್ಜಿ ಕರೆಂಟ್ ಬಿಲ್ ಅಷ್ಟು ಕಟ್ಟಬೇಕಿಲ್ಲ. ಕರೆಂಟ್ ಬಿಲ್ಲ ಹೆಚ್ಚಳ ಆಗಿರೋದಕ್ಕೆ ಕಾರಣ ನಾವಲ್ಲ ಎಂದು ತಿಳಿಸಿದರು.