Home ಕ್ರೀಡೆ ಐಪಿಎಲ್ 2022| ವಾಂಖೆಡೆ ಮೈದಾನದಲ್ಲಿ ‘ಪವರ್ ಕಟ್’ !

ಐಪಿಎಲ್ 2022| ವಾಂಖೆಡೆ ಮೈದಾನದಲ್ಲಿ ‘ಪವರ್ ಕಟ್’ !

ಮುಂಬೈ: ಐಪಿಎಲ್‌ನ 15ನೇ ಆವೃತ್ತಿಯ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ನಡುವಿನ ಪಂದ್ಯ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಮೈದಾನದ ಅಂಪೈರ್‌ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಚೆನ್ನೈ ತಂಡಕ್ಕೆ ವಿದ್ಯುತ್‌ ಅಡಚಣೆಯಾಗಿದೆ.


ಐಪಿಎಲ್‌ನ’ 59ನೇ ಪಂದ್ಯದಲ್ಲಿ ಟಾಸ್‌ ಸೋತು ಇನಿಂಗ್ಸ್ ಆರಂಭಿಸಿದ್ದ ಸಿಎಸ್ಕೆ, ಮೊದಲ ಓವರ್ನ 2ನೇ ಎಸೆತದಲ್ಲೇ ವಿಕೆಟ್ ಕಳೆದುಕೊಂಡಿತು. ಡ್ಯಾನಿಯಲ್ ಸ್ಯಾಮ್ಸ್ ಎಸೆದ ಎಸೆತವನ್ನು ಗುರುತಿಸುವಲ್ಲಿ ಎಡವಿದ ಡೆವೊನ್ ಕಾನ್ವೆ ಎಲ್ಬಿಡಬ್ಲ್ಯೂ ಆಗಿದ್ದರು. ಚೆಂಡು ವಿಕೆಟ್‌ನಾಚೆ ಹೋಗುತ್ತಿರುವುದು ರೀಪ್ಲೇನಲ್ಲಿ ಸ್ಪಷ್ಟವಾಗಿತ್ತು. ಆದರೆ ಮೈದಾನದ ಅಂಪೈರ್ ನೀಡಿದ್ದ ತೀರ್ಪು ಪ್ರಶ್ನಿಸಿ, ಟಿವಿ ಅಂಪೈರ್ಗೆ ಮನವಿ ಸಲ್ಲಿಸಲು (DRS) ಅವಕಾಶ ಇರಲಿಲ್ಲ. ಹೀಗಾಗಿ ನಿರಾಸೆಯಿಂದಲೇ ಡೆವೊನ್ ಕಾನ್ವೆ, ಖಾತೆ ತೆರೆಯುವ ಮುನ್ನವೇ ಪೆವಿಲಿಯನ್‌ಗೆ ಹಿಂತಿರುಗಿದರು.


ನಂತರ ಬಂದ ಅನುಭವಿ ಮೊಯೀನ್ ಅಲಿ, ತಾನೆದುರಿಸಿದ ಮೂರನೇ ಎಸೆತದಲ್ಲಿ ಶೋಕೀನ್‌ಗೆ ಸುಲಭ ಕ್ಯಾಚಿತ್ತು ಶೂನ್ಯಕ್ಕೆ ನಿರ್ಗಮಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಬಂದ ರಾಬಿನ್ ಉತ್ತಪ್ಪ ಜಸ್ಪ್ರೀತ್ ಬುಮ್ರಾ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆದರು. ದುರಾದೃಷ್ಟವೆಂಬಂತೆ ಈ ಬಾರಿಯೂ ಅಂಪೈರ್ ತೀರ್ಪು ಪ್ರಶ್ನಿಸಿ, DRS ಆಯ್ಕೆಯ ಅವಕಾಶವಿರಲಿಲ್ಲ.


ಪಂದ್ಯ ನಡೆಯುತ್ತಿರುವ ವಾಂಖೆಡೆ ಸ್ಟೇಡಿಯಂನಲ್ಲಿ ವಿದ್ಯುತ್ ಕಡಿತದ ಕಾರಣ DRS ತಂತ್ರಜ್ಞಾನ ಬಳಸಲು ಸಾಧ್ಯವಿರಲಿಲ್ಲ. ಹೀಗಾಗಿ ಡೆವೊನ್ ಕಾನ್ವೆ ಹಾಗೂ ರಾಬಿನ್ ಉತ್ತಪ್ಪ ಮೈದಾನದ ಅಂಪೈರ್ ನೀಡಿದ ತೀರ್ಪಿನಿಂದಾಗಿ ಪೆವಿಲಿಯನ್ ಸೇರಬೇಕಾಯಿತು.


ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ನ 15ನೇ ಆವೃತ್ತಿಯ 59ನೇ ಪಂದ್ಯದಲ್ಲಿ ವಿದ್ಯುತ್‌ ಕಡಿತದಿಂದಾಗಿ ಪಂದ್ಯದ ಟಾಸ್‌ ನಡೆಸುವುದು ಎರಡು ನಿಮಿಷ ತಡವಾಗಿತ್ತು. ಆ ಬಳಿಕ ಎರಡು ಬಾರಿ ಡಿಆರ್‌ಎಸ್‌ ಪಡೆಯಲು ಕೂಡ ಸಿಎಸ್‌ಕೆ ತಂಡಕ್ಕೆ ಸಾಧ್ಯವಾಗಲಿಲ್ಲ.
ವಿದ್ಯುತ್‌ ಕಡಿತದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ#powercut #NoDRS ಹ್ಯಾಷ್‌ಟ್ಯಾಗ್‌ ಟ್ರೆಂಡಿಂಗ್‌ ಆಗಿದೆ.

Join Whatsapp
Exit mobile version