ತಮಿಳುನಾಡು: ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ತಮಿಳುನಾಡಿನ ಕುಂಭಕೋಣಂ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಶರವಣನ್ ಮೇಯರ್ ಆಗಿ ಆಯ್ಕೆಯಾದ ವ್ಯಕ್ತಿ. 48 ವಾರ್ಡ್ ಗಳಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿ 42 ಸ್ಥಾನಗಳಲ್ಲಿ ಜಯ ಸಾಧಿಸಿದ್ದು, ಇದೀಗ ಮೇಯರ್ ಆಗಿ ಸರವಣನ್ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿರುವ ಸರವಣನ್ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದು, ಬಾಡಿಗೆ ಮನೆಯಲ್ಲಿ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಮೇಯರ್ ಆಗಿ ಆಯ್ಕೆಯಾದ ಬಳಿಕ ಸರವಣನ್ ಪ್ರಮಾಣವಚನ ಸ್ವೀಕಾರ ಮಾಡಲು ಆಟೋದಲ್ಲಿ ಪಾಲಿಕೆಗೆ ಆಗಮಿಸಿ, ಗಮನ ಸೆಳೆದರು.
ಶುಕ್ರವಾರವಷ್ಟೇ ಚೆನ್ನೈ ಪಾಲಿಕೆ ಮೇಯರ್ ಆಗಿ 28 ವರ್ಷದ ದಲಿತ ಯುವತಿ ಪ್ರಿಯಾ ಆಯ್ಕೆಯಾಗಿದ್ದಾರೆ.