Home ಕರಾವಳಿ ಸ್ವಚ್ಚ ನಾಡಿಗಾಗಿ ಸೈನಿಕರಂತೆ ಸೇವೆ ಸಲ್ಲಿಸುವ ಪೌರ ಕಾರ್ಮಿಕರಿಗೆ ಸೂಕ್ತ ವಾಹನ ಒದಗಿಸದೇ ಇರುವುದು ದುರಂತ:...

ಸ್ವಚ್ಚ ನಾಡಿಗಾಗಿ ಸೈನಿಕರಂತೆ ಸೇವೆ ಸಲ್ಲಿಸುವ ಪೌರ ಕಾರ್ಮಿಕರಿಗೆ ಸೂಕ್ತ ವಾಹನ ಒದಗಿಸದೇ ಇರುವುದು ದುರಂತ: SDTU

ಮಂಗಳೂರು: ಸ್ವಚ್ಚ ನಾಡಿಗಾಗಿ ಸೈನಿಕರಂತೆ ಸೇವೆ ಸಲ್ಲಿಸುವ ಪೌರ ಕಾರ್ಮಿಕರಿಗೆ ಸೂಕ್ತ ವಾಹನ, ಅಗತ್ಯ ಸುರಕ್ಷಾ ಸಲಕರಣೆಗಳನ್ನು ಒದಗಿಸದೇ ಇರುವುದು ದುರಂತ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ಉಳ್ಳಾಲ ಏರಿಯಾ ಸಮಿತಿ ಖೇದ ವ್ಯಕ್ತಪಡಿಸಿದೆ.

ಈ ಬಗ್ಗೆ ಪತ್ರಿಕೆ ಹೇಳಿಕೆ ಬಿಡುಗಡೆ ಮಾಡಿರುವ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ಮಂಗಳೂರು (ಉಳ್ಳಾಲ) ಏರಿಯಾ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮದನಿ ನಗರ, ಇತ್ತೀಚಿಗೆ ಕಸ ವಿಲೇವಾರಿ ನಡೆಸುವ ವಾಹನದ ದುರಾವಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತುಕ್ಕು ಹಿಡಿದ ವಾಹನದಲ್ಲಿ ಚಾಲಕ ಡೋರ್ ತೆಗೆಯದೆ ವಿಂಡೋ ಮೂಲಕ ವಾಹನದ ಒಳಗೆ ಹೋಗುವ ಅತ್ಯಂತ ದಯನೀಯ ಮತ್ತು ಅಪಾಯಕಾರಿಯಾದ ದ್ರಶ್ಯ ಕಂಡು ನಾಗರಿಕ ಸಮಾಜವೇ ಬೆಚ್ಚಿ ಬೀಳುವಂತಾಗಿದೆ. ನಗರ ವಾಸಿಗಳನ್ನು ಆರೋಗ್ಯದಿಂದ ಸಂರಕ್ಷಿಸುವ ಮಹತ್ತರವಾದ ಸೇವೆ ನೀಡಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಪೌರ ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದೆ ಬೇಜವಾಬ್ದಾರಿಯಿಂದ ವರ್ತಿಸಿದ ಅಧಿಕೃತರು ಸ್ವಚ್ಛತಾ ಸೇವೆಯಲ್ಲಿ ತೊಡಗಿಕೊಂಡ ಚಾಲಕರನ್ನು ಸೇರಿದಂತೆ ಪೌರ ಕಾರ್ಮಿಕರನ್ನು ಮನುಷ್ಯರಂತೆ ಕಂಡು ಅವರ ಭದ್ರತೆಗಾಗಿ ಕ್ರಮ ಕೈಗೊಳ್ಳಲು ನಗರಾಡಳಿತ ಮತ್ತು ಸರಕಾರವನ್ನು ಒತ್ತಾಯಿಸಿದ್ದಾರೆ.

Join Whatsapp
Exit mobile version