ಜೈಪುರ: ಪಾಕಿಸ್ತಾನದ ಐಎಸ್ಐಗೆ ಗೌಪ್ಯ ಮಾಹಿತಿಯನ್ನು ರವಾನಿಸುತ್ತಿದ್ದ ಪೋಸ್ಟ್ ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದ ಭರತ್ ಎಂಬಾತನನ್ನು ಬಂಧಿಸಲಾಗಿದೆ.
ಜೈಪುರ ರೈಲ್ವೇ ನಿಲ್ದಾಣದ ಬಳಿಯ ಅಂಚೆ ಕಚೇರಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಭರತ್ ಗೋಡಾರ, ಕಳೆದ ಆರು ತಿಂಗಳಿನಿಂದ ಐಎಸ್‌ಐಗೆ ರಾಷ್ಟ್ರೀಯ ಪ್ರಾಮುಖ್ಯತೆಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ಮಾರಾಟ ಮಾಡುತ್ತಿದ್ದ ಎಂದು ವರದಿಯಾಗಿದೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆಗೆ ಸೇನೆಯ ಪ್ರಮುಖ ದಾಖಲೆಗಳ ಛಾಯಾಚಿತ್ರಗಳನ್ನು ಮತ್ತು ಗೌಪ್ಯ ದಾಖಲೆಗಳನ್ನು ಭರತ್ ಕಳುಹಿಸುತ್ತಿದ್ದ. ಈತನನ್ನು ಹನಿಟ್ರ್ಯಾಪ್ ಮೂಲಕ ಟ್ರ್ಯಾಪ್ ಮಾಡಲಾಗಿತ್ತು ಎಂದು ತಿಳಿದುಬಂದಿದೆ.