ನವದೆಹಲಿ: ಕರಾಳ AFSPA ಕಾಯ್ದೆಯನ್ನು ಸಂಪೂರ್ಣವಾಗಿ ಹಿಂಪಡೆಯಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮೆನ್ ಒ.ಎಂ.ಎ.ಸಲಾಂ ಆಗ್ರಹಿಸಿದ್ದಾರೆ.
ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ಅಸ್ಸಾಂ, ಮಣಿಪುರಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾನೂನು (AFSPA) ಅಡಿಯಲ್ಲಿ ಬರುವ ಪ್ರದೇಶಗಳನ್ನು ತಗ್ಗಿಸುವ ಸರಕಾರದ ಪ್ರಸಕ್ತ ನಿರ್ಧಾರವು ಆ ರಾಜ್ಯಗಳ ಜನತೆಗೆ ಒಂದು ಪರಿಹಾರವಾಗಿದೆ. ಈ ಕಾನೂನು ಭದ್ರತಾ ಪಡೆಗಳಿಗೆ ನಿರ್ದಿಷ್ಟ ಕ್ಷೇತ್ರಗಳಲ್ಲಿ ಸಂಶಯದ ಆಧಾರದಲ್ಲಿ ಯಾವುದೇ ವ್ಯಕ್ತಿಯ ಮೇಲೆ ಗುಂಡು ಹಾರಿಸುವ, ಯಾರನ್ನು ಬೇಕಾದರೂ ಬಂಧಿಸುವ ಮತ್ತು ವಾರಂಟ್ ಇಲ್ಲದೆಯೇ ವಿಚಾರಣೆ ನಡೆಸುವ ಅನುಮತಿ ನೀಡುತ್ತದೆ. ಈ ರೀತಿಯ ಕಾನೂನುಗಳು, ಈ ಕಾನೂನು ಜಾರಿಯಲ್ಲಿರುವ ಪ್ರದೇಶಗಳ ಜನರ ಜೀವನವನ್ನೇ ನಾಶಪಡಿಸಿಬಿಟ್ಟಿದೆ.
ಕಳೆದ ಕೆಲವು ದಶಕಗಳಲ್ಲಿ ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಅನಿಯಂತ್ರಿತ ಹತ್ಯೆಗಳು ಮತ್ತು ಬಂಧನಗಳಿಗೆ ಈ ವಿಶೇಷಾಧಿಕಾರಿಗಳನ್ನು ದೊಡ್ಡ ಪ್ರಮಾಣದಲ್ಲಿ ದುರ್ಬಳಕೆ ನಡೆಸಿರುವುದು ಕಂಡು ಬರುತ್ತದೆ. ಇದು ಜನರಲ್ಲಿ ಬಹಳಷ್ಟು ಆಕ್ರೋಶವನ್ನೂ ಉಂಟು ಮಾಡಿದೆ.
AFSPA ಒಂದು ಅಸಂವಿಧಾನಿಕ ಮತ್ತು ಅಪ್ರಜಾಸತ್ತಾತ್ಮಕ ಕಾನೂನು ಆಗಿದೆ. ಇದರ ಅಸ್ತಿತ್ವ ಮಾನವ ಹಕ್ಕುಗಳು ಮತ್ತು ದೇಶದ ಒಕ್ಕೂಟ ವ್ಯವಸ್ಥೆಗೆ ಅತ್ಯಂತ ಅಪಾಯಕಾರಿಯಾಗಿದೆ. ಆದುದರಿಂದ ಎ.ಎಫ್.ಎಸ್.ಪಿ.ಎಯನ್ನು ದೇಶಾದ್ಯಂತ ಹಿಂಪಡೆಯುವುದರೊಂದಿಗೆ ಯುಎಪಿಎ, ದೇಶದ್ರೋಹ ಕಾನೂನು ಮತ್ತು ಪಿ.ಎಂ.ಎ.ಎಲ್ ನಂತಹ ಕರಾಳ ಕಾನೂನುಗಳನ್ನೂ ರದ್ದುಪಡಿಸಬೇಕೆಂದು ಪಾಪ್ಯುಲರ್ ಫ್ರಂಟ್ ಸರ್ಕಾರವನ್ನು ಒತ್ತಾಯಿಸಿದೆ.