Home ರಾಜ್ಯ ಹಾಸನ: ಪಾಪ್ಯುಲರ್ ಫ್ರಂಟ್ ಕೊರೋನಾ ವಾರಿಯರ್ಸ್ ಗಳಿಗೆ ಸನ್ಮಾನ

ಹಾಸನ: ಪಾಪ್ಯುಲರ್ ಫ್ರಂಟ್ ಕೊರೋನಾ ವಾರಿಯರ್ಸ್ ಗಳಿಗೆ ಸನ್ಮಾನ

ಹಾಸನ, ಜು.20: ಹಾಸನದ ಜಾಮಿಯಾ ಮಸೀದಿಯಲ್ಲಿ ಜಮೀಯತುಲ್-ಉಲಮಾ-ಇ-ಹಿಂದ್ ವತಿಯಿಂದ ಪಾಪ್ಯುಲರ್ ಫ್ರಂಟ್ ನ ಕೊರೋನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸಿದ 36 ಕ್ಕಿಂತಲೂ ಹೆಚ್ಚು ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.


ಕೋವಿಡ್ ಸೋಂಕಿನಿಂದ ಮೃತಪಟ್ಟವರ ಪಾರ್ಥೀವ ಶರೀರದ ಅಂತ್ಯಸಂಸ್ಕಾರವನ್ನು ಯಾವುದೇ ಜಾತಿ, ಮತಭೇದವಿಲ್ಲದೆ ಈ ಕಾರ್ಯಕರ್ತರು ಗೌರವಯುತವಾಗಿ ನೆರವೇರಿಸಿದ್ದರು. ಇದುವರೆಗೆ 336ಕ್ಕೂ ಅಧಿಕ ಮೃತದೇಹಗಳ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.


ಜಿಲ್ಲಾ ಅಧ್ಯಕ್ಷರಾದ ಸೂಫಿ ಇಬ್ರಾಹೀಂ, ಜಿಲ್ಲಾ ಸಮಿತಿ ಸದಸ್ಯರಾದ ಶಜೀಲ್ ಅಹಮದ್, ಜಿಲ್ಲಾ ಸಮಿತಿ ಸದಸ್ಯರಾದ ಆಫ್ಜಲ್ ಪಾಷಾ ಹಾಗೂ ಇತರ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರನ್ನು ಹಾಸನ ಜಾಮಿಯಾ ಮಸ್ಜಿದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಮೀಯತುಲ್ ಉಲಮಾ ಇ ಹಿಂದ್ ವಲಯ ಅಧ್ಯಕ್ಷರು, ಜಿಲ್ಲಾ ಅಧ್ಯಕ್ಷರಾದ ಮುಫ್ತಿ ಅಸ್ಲಂ, ನಗರದ ಹಲವು ವೈದ್ಯರು ಪಾಲ್ಗೊಂಡಿದ್ದರು.

Join Whatsapp
Exit mobile version