Home ಟಾಪ್ ಸುದ್ದಿಗಳು ಹಿರಿಯ ದಲಿತ ಮುಖಂಡ, ಬಹುಜನ ಚಳುವಳಿಯ ರೂವಾರಿ ಪಿ.ಡೀಕಯ್ಯರ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಸಂತಾಪ

ಹಿರಿಯ ದಲಿತ ಮುಖಂಡ, ಬಹುಜನ ಚಳುವಳಿಯ ರೂವಾರಿ ಪಿ.ಡೀಕಯ್ಯರ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಸಂತಾಪ

ಬೆಂಗಳೂರು: ಬಹುಜನ ಚಳವಳಿಯ ರೂವಾರಿ ಮತ್ತು ದಲಿತ ಮುಖಂಡ ಪಿ.ಡೀಕಯ್ಯರವರ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ನಾಸಿರ್ ಪಾಶ ತೀವ್ರ ಸಂತಾಪ ಸೂಚಿಸಿದ್ದಾರೆ.

ಡೀಕಯ್ಯರವರು ಹೋರಾಟಗಾರರಾಗಿದ್ದುಕೊಂಡು ತನ್ನ ಜೀವನದ ಬಹುಪಾಲನ್ನು ಶೋಷಿತ ಸಮುದಾಯದ ಏಳಿಗಾಗಿಯೇ ಸವೆದರು. ಬಹುಜನ ಚಳವಳಿಯನ್ನು ಪೋಷಿಸಿ ಬೆಳೆಸಲು ಅವರು ಅವಿರತ ಶ್ರಮ ವಹಿಸಿದರು. ದಲಿತ ಸಮುದಾಯಗಳ ಮೇಲಿನ ದೌರ್ಜನ್ಯ, ಅಸ್ಪೃಶ್ಯತೆ, ತಾರತಮ್ಯದ ವಿರುದ್ಧ ತಮ್ಮ ಭಾಷಣ-ಬರಹಗಳ ಮೂಲಕ ಧ್ವನಿ ಎತ್ತಿದರು. ಮನುಷ್ಯತ್ವಕ್ಕೆ ಮಾರಕವಾಗಿರುವ ಮನುವಾದವನ್ನು ಅವರು ತೀಕ್ಷ್ಣವಾಗಿ ವಿರೋಧಿಸಿದ್ದರು. ಕರಾವಳಿ ಕರ್ನಾಟಕ ಮಾತ್ರವಲ್ಲದೇ ರಾಜ್ಯ ಮತ್ತು ದೇಶದ ಇತರ ಭಾಗಗಳಿಗೂ ಸಂಚರಿಸಿ ಅವರು ತಮ್ಮ ಸಮಾಜ ಪರಿವರ್ತನೆಯ ಕನಸನ್ನು ಬಿತ್ತಿದರು. ಹೋರಾಟಗಾರರಿಗೆ ಅವರು ಸದಾ ಪ್ರೇರಕರಾಗಿದ್ದರು. ಡೀಕಯ್ಯರವರು ಪಾಪ್ಯುಲರ್ ಫ್ರಂಟ್ ನಡೆಸಿದ ಹಲವು ಹೋರಾಟಗಳಲ್ಲೂ ಜೊತೆಯಾಗಿದ್ದರು. ಡೀಕಯ್ಯರವರ ನಿಧನವು ಶೋಷಿತ ವರ್ಗಗಳಿಗೆ ತುಂಬಲಾರದ ನಷ್ಟವಾಗಿದೆ. ಅವರ ಬದುಕು ಬರಹ ಮುಂದಿನ ತಲೆಮಾರಿಗೆ ಸ್ಫೂರ್ತಿಯಾಗಲಿ ಎಂದು ನಾಸಿರ್ ಪಾಶ ಸಂತಾಪ ಸೂಚಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version