Home ಕರಾವಳಿ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ, ಮಲ್ಪೆ ವತಿಯಿಂದ ಸಾರ್ವಜನಿಕ ರಕ್ತದಾನ ಶಿಬಿರ

ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ, ಮಲ್ಪೆ ವತಿಯಿಂದ ಸಾರ್ವಜನಿಕ ರಕ್ತದಾನ ಶಿಬಿರ

ಉಡುಪಿ: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಮಲ್ಪೆ ವತಿಯಿಂದ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇದರ ಸಹಯೋಗದೊಂದಿಗೆ ಸಾರ್ವಜನಿಕ ರಕ್ತದಾನ ಶಿಬಿರ ಇಂದು ಮಲ್ಪೆಯ ಸಯ್ಯಿದಿನ ಅಬೂಬಕ್ಕರ್ ಸಿದ್ದೀಕ್ ಜಾಮಿಯಾ ಮಸೀದಿ ಹೊರಾಂಗಣದಲ್ಲಿ ನಡೆಯಿತು.

ಈ ರಕ್ತದಾನ ಶಿಬಿರದಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇದರ ಪ್ರೊಫೆಸರ್ ಹಾಗೂ ಬ್ಲಡ್ ಸೆಂಟರ್ ನ ಹೆಡ್ ಆಗಿರುವ ಡಾಕ್ಟರ್ ಶಮೀ ಶಾಸ್ತ್ರಿ ಯವರು ಭಾಗವಹಿಸಿ ರಕ್ತದಾನದ ಮಹತ್ವದ ಬಗ್ಗೆ ವಿವರಿಸಿದರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷರಾಗಿರುವ ನಜೀರ್ ಅಹ್ಮದ್, ಆಕ್ಸೆಸ್ ಇಂಡಿಯಾ ಟ್ರೈನರ್ ಮತ್ತು ಸರ್ಟಿಫೈಡ್ ಹೆಲ್ತ್ ಕೋಚ್ ಆಗಿರುವ ರಿಜ್ವಾನ್ ಅಬ್ದುಲ್ ರೆಹಮಾನ್, ಮಲ್ಪೆ ಜಾಮಿಯಾ ಮಸೀದಿ ಅಧ್ಯಕ್ಷರಾಗಿರುವ ಖತೀಬ್ ಅಬ್ದುಲ್ ರಶೀದ್ ರವರು ಭಾಗವಹಿಸಿ ಮಾತನಾಡಿದರು..
ಆರೋಗ್ಯ ಕ್ಷೇತ್ರದಲ್ಲಿ ಸಾಧನೆಗೈದ ಇಬ್ಬರು ಸಾಧಕರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸುಮಾರು 69 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

ಕಾರ್ಯಕ್ರಮದಲ್ಲಿ ಮುಹಮ್ಮದ್ ಯಾಸೀನ್ (ಗೌರವಾಧ್ಯಕ್ಷರು ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ ಫಾರಂ ಮಲ್ಪೆ), ಹೆಚ್ ಮುಹಮ್ಮದ್ ಸಿರಾಜ್ (ಅಧ್ಯಕ್ಷರು ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಮಲ್ಪೆ)
ಇಸ್ಮಾಯಿಲ್ ಶರೀಫ್ (ಪ್ರಧಾನ ಕಾರ್ಯದರ್ಶಿ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಮಲ್ಪೆ) ಹಾಗೂ ಪಾಪ್ಯುಲರ್ ಫ್ರಂಟ್ ಕೋಸ್ಟಲ್ ವಿಭಾಗಿಯ ಅಧ್ಯಕ್ಷರಾಗಿರುವ ಅಬ್ದುಲ್ ಶುಕೂರ್ ಅವರು ಭಾಗವಹಿಸಿದ್ದರು. ತಾಬಿಷ್ ಆದಿ ಉಡುಪಿ ನಿರೂಪಿಸಿದರು.

Join Whatsapp
Exit mobile version