ಬಾರ್ಸಿಲೋನಾ: ಕೊಲೊಂಬಿಯಾ ಪಾಪ್ ಗಾಯಕಿ ಶಕೀರಾಗೆ ತೆರಿಗೆ ವಂಚನೆ ಆರೋಪದಲ್ಲಿ ಸ್ಪೇನ್ ನ್ಯಾಯಾಲಯವು ಬೃಹತ್ ಮೊತ್ತದ ದಂಡ ಕಟ್ಟುವಂತೆ ಆದೇಶ ಹೊರಡಿಸಿದೆ,
ಶಕೀರಾ, 2012 ಮತ್ತು 2014 ರ ನಡುವೆ ಸ್ಪ್ಯಾನಿಷ್ ಸರ್ಕಾರಕ್ಕೆ 14.5 ಮಿಲಿಯನ್ ಯುರೋ ತೆರಿಗೆ ಪಾವತಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ 24 ಮಿಲಿಯನ್ ಯುರೋ (24 ಮಿಲಿಯನ್ ಯುಎಸ್ ಡಿ) ದಂಡವನ್ನು ಪಾವತಿಸಬೇಕಾಗಿ ನ್ಯಾಯಾಲಯ ವಿಧಿಸಿದೆ.
ಶಕೀರಾ ಅವರ ಸ್ಪ್ಯಾನಿಷ್ ಸಾರ್ವಜನಿಕ ಸಂಪರ್ಕ ತಂಡವು, ಗಾಯಕಿಯು ಈಗಾಗಲೇ ತಾನು ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು 3 ಮಿಲಿಯನ್ ಯುರೋಗಳ ಬಡ್ಡಿಯೊಂದಿಗೆ ಪಾವತಿಸಿದ್ದಾರೆ ಎಂದು ಹೇಳಿಕೊಂಡಿದೆ. ಆದಾಗ್ಯೂ, 45 ವರ್ಷದ ಪಾಪ್ ತಾರೆ 2012 ರಿಂದ 2014 ರ ನಡುವೆ ಸ್ಪೇನ್ನಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದರಿಂದ ದೇಶದಲ್ಲಿ ತೆರಿಗೆ ಪಾವತಿಸಬೇಕಾಗಿತ್ತು ಎಂದು ಸ್ಪ್ಯಾನಿಶ್ ಪ್ರಾಸಿಕ್ಯೂಟರ್ಗಳು ಒತ್ತಿ ಹೇಳಿದರು.
ಶಕೀರಾ, ಬಾರ್ಸಿಲೋನಾ ಫುಟ್ಬಾಲ್ ತಾರೆ ಗೆರಾರ್ಡ್ ಮತ್ತು ಇಬ್ಬರು ಮಕ್ಕಳೊಂದಿಗೆ 11 ವರ್ಷಗಳ ಕಾಲ ಬಾರ್ಸಿಲೋನಾದಲ್ಲಿ ವಾಸಿಸುತ್ತಿದ್ದರು. ಇದೀಗ ದಂಪತಿಗಳು ಪರಸ್ಪರ ಬೇರ್ಪಡುವ ಚಿಂತನೆ ಮಾಡಿಕೊಂಡಿದ್ದರು.