Home ಟಾಪ್ ಸುದ್ದಿಗಳು ಡಿಜೆ ಹಳ್ಳಿ, ಕೆ.ಜೆ ಹಳ್ಳಿ ಗಲಭೆ ಬಿಜೆಪಿ ಪ್ರಾಯೋಜಿತ ಎಂಬುದು ಪೂಂಜಾನ ಭಾಷಣದಿಂದ ರುಜುವಾತಾಗಿದೆ: ಅನ್ವರ್...

ಡಿಜೆ ಹಳ್ಳಿ, ಕೆ.ಜೆ ಹಳ್ಳಿ ಗಲಭೆ ಬಿಜೆಪಿ ಪ್ರಾಯೋಜಿತ ಎಂಬುದು ಪೂಂಜಾನ ಭಾಷಣದಿಂದ ರುಜುವಾತಾಗಿದೆ: ಅನ್ವರ್ ಸಾದತ್

ಮಂಗಳೂರು: ಡಿಜೆ ಹಳ್ಳಿ, ಕೆ.ಜೆ ಹಳ್ಳಿಯಲ್ಲಿ ಗಲಭೆ ಎಬ್ಬಿಸಿ ಅಮಾಯಕ ಮುಸ್ಲಿಮರನ್ನು UAPA ಅಡಿಯಲ್ಲಿ ಬಂಧಿಸಿ ಜೈಲಿಗಟ್ಟಿರುವುದು ಬಿಜೆಪಿ ಪ್ರಾಯೋಜಿತ ಎಂಬುದು ಶಾಸಕ ಹರೀಶ್ ಪೂಂಜಾನ ಭಾಷಣದಿಂದ ರುಜುವಾತಾಗಿದೆ ಎಂದು ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಹೇಳಿದ್ದಾರೆ.

ಈ ಬಗ್ಗೆ ಎಕ್ಸ್ ಮಾಡಿರುವ ಅವರು, ಡಿಜೆ ಹಳ್ಳಿ ಕೆ.ಜೆ ಹಳ್ಳಿಯಲ್ಲಿ ಗಲಭೆ ಎಬ್ಬಿಸಿ ಅಮಾಯಕ ಮುಸ್ಲಿಮರನ್ನು UAPA ಅಡಿಯಲ್ಲಿ ಬಂಧಿಸಿ ಜೈಲಿಗಟ್ಟಿರುವುದು ಬಿಜೆಪಿ ಪ್ರಾಯೋಜಿತ ಎಂಬುದು ಶಾಸಕ ಹರೀಶ್ ಪೂಂಜಾನ ಭಾಷಣದಿಂದ ರುಜುವಾತಾಗಿದೆ. ಅಂದಿನ ಗಲಭೆಯ ರುವಾರಿಗಳು ಬಿಜೆಪಿಗರೆ ಎಂಬ ಸತ್ಯ ಹೊರಬಂದಿದೆ. ಎನ್ ಐಎ ಕೂಡಲೇ ಕೆಜೆ ಹಳ್ಳಿ ಡಿಜೆ ಹಳ್ಳಿ ಗಲಭೆಯ ಮರು ತನಿಖೆ ನಡೆಸಬೇಕು ಮತ್ತು ಗಲಭೆಯ ನೈಜ ಸೂತ್ರದಾರಿಗಳನ್ನು ಜೈಲಿಗೆ ಕಳಿಸಬೇಕು ಎಂದು ಹೇಳಿದ್ದಾರೆ.

Join Whatsapp
Exit mobile version