Home ಟಾಪ್ ಸುದ್ದಿಗಳು ಗುರ್ಗಾಂವ್ ನಲ್ಲಿ ಶುಕ್ರವಾರದ ನಮಾಝ್ ವಿರೋಧಿಸಿ ಸಂಘಪರಿವಾರದಿಂದ ಸಾರ್ವಜನಿಕ ಸ್ಥಳದಲ್ಲಿ ಭಜನೆ, ಪೂಜೆ

ಗುರ್ಗಾಂವ್ ನಲ್ಲಿ ಶುಕ್ರವಾರದ ನಮಾಝ್ ವಿರೋಧಿಸಿ ಸಂಘಪರಿವಾರದಿಂದ ಸಾರ್ವಜನಿಕ ಸ್ಥಳದಲ್ಲಿ ಭಜನೆ, ಪೂಜೆ

ನವದೆಹಲಿ: ಗುರ್ಗಾಂವ್ ನ ಖಾಸಗಿ ಜಾಗದಲ್ಲಿ ಮುಸ್ಲಿಮರು ನಿರ್ವಹಿಸುತ್ತಿದ್ದ ಶುಕ್ರವಾರದ ನಮಾಝ್ ವಿರೋಧಿಸಿ ಸಂಘಪರಿವಾರ ಕಾರ್ಯಕರ್ತರು ಸಾರ್ವಜನಿಕವಾಗಿ ತೆರೆದ ಸ್ಥಳದಲ್ಲಿ ಭಜನೆ ಮತ್ತು ಪೂಜೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

ಗುರ್ಗಾಂವ್ ನ ಜಿಲ್ಲಾಡಳಿತ ಸೂಚಿಸಿದ 37 ಕಡೆ ಖಾಸಗಿ ಸ್ಥಳದಲ್ಲಿ ಮುಸ್ಲಿಮ್ ಸಮುದಾಯ ನಿರಂತರ 2 ವರ್ಷಗಳಿಂದ ನಮಾಝ್ ನಿರ್ವಹಿಸುತ್ತಾ ಬಂದಿದೆ. ಈ ಮಧ್ಯೆ ಕಳೆದ 2 ತಿಂಗಳಿನಿಂದ ಮುಸ್ಲಿಮರ ನಮಾಝ್ ಗೆ ವಿರೋಧ ವ್ಯಕ್ತಪಡಿಸಿ ಸಂಘಪರಿವಾರ ಪ್ರತಿಭಟನೆಯ ನೆಪದಲ್ಲಿ ದಾಂಧಲೆ ನಡೆಸಿತ್ತು.

ಸಂಘಪರಿವಾರದ ತೀವ್ರ ಪ್ರತಿಭಟನೆ ಮತ್ತು ಸ್ಥಳೀಯರ ಆಕ್ಷೇಪವನ್ನು ಮುಂದಿಟ್ಟುಕೊಂಡು ಜಿಲ್ಲಾಡಳಿತ 7 ಕಡೆ ನಮಾಝ್ ಗೆ ನೀಡಿದ ಅನುಮತಿಯನ್ನು ಹಿಂಪಡೆದಿತ್ತು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಶುಕ್ರವಾರ ಮತ್ತೆ ಸಂಘಪರಿವಾರ, ಪ್ರತಿಭಟನೆಯ ನೆಪದಲ್ಲಿ ಮುಸ್ಲಿಮ್ ಸಮುದಾಯದ ನಮಾಝ್ ಗೆ ವಿರೋಧ ವ್ಯಕ್ತಪಡಿಸಿದೆಯಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಭಜನೆ ಮತ್ತು ಪೂಜೆ ನೆರವೇರಿಸುತ್ತಿರುವಾಗ ಜಿಲ್ಲಾಡಳಿತ ಮೌನವಹಿಸಿದೆ.

Join Whatsapp
Exit mobile version