Home ಟಾಪ್ ಸುದ್ದಿಗಳು ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ| ವೇಳಾಪಟ್ಟಿ ಪ್ರಕಟ

ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ| ವೇಳಾಪಟ್ಟಿ ಪ್ರಕಟ

ಬೆಂಗಳೂರು: ಅವಧಿ ಮುಗಿದ ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಸೋಮವಾರ ವೇಳಾಪಟ್ಟಿ ಪ್ರಕಟಿಸಿದೆ.

ಡಿಸೆಂಬರ್ 27ರಂದು ಮತದಾನ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಡಿಸೆಂಬರ್ 15 ಕೊನೆ ದಿನವಾಗಿದೆ. ಡಿ.18 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಚುನಾವಣೆ ಸಂಬಂಧ ಡಿ.8ರಂದು ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಲಿದ್ದಾರೆ.

1,185 ವಾರ್ಡ್ ಗಳಿಗೆ ಚುನಾವಣೆ ನಡೆಯಲಿದ್ದು, 19 ಪುರಸಭೆಗಳು, 34 ಪಟ್ಟಣ ಪಂಚಾಯತ್ ,ವಿವಿಧ ಕಾರಣಗಳಿಂದ ತೆರವಾಗಿರುವ ನಗರಸಭೆಯ 5 ಸ್ಥಾನಗಳು, ಪುರ ಸಭೆಯ 3 ಮತ್ತು ಪಟ್ಟಣ ಪಂಚಾಯತ್ ನ 1 ವಾರ್ಡ್ ಗೆ ಚುನಾವಣೆ ನಡೆಯಲಿದೆ.

ಡಿಸೆಂಬರ್ 29 ರಂದು ಮರು ಮತದಾನವೂ ನಡೆಯಲಿದೆ. ಡಿಸೆಂಬರ್ 30 ಕ್ಕೆ ಮತ ಎಣಿಕೆ ನಡೆಯಲಿದೆ.

Join Whatsapp
Exit mobile version