Home ಟಾಪ್ ಸುದ್ದಿಗಳು ಮಧ್ಯಪ್ರದೇಶ ಚುನಾವಣೆ ಹಿನ್ನೆಲೆ: ಪುರಾಣ ಕತೆಗಳ ಪಾತ್ರಗಳ ಮೊರೆ ಹೋದ ರಾಜಕಾರಣಿಗಳು

ಮಧ್ಯಪ್ರದೇಶ ಚುನಾವಣೆ ಹಿನ್ನೆಲೆ: ಪುರಾಣ ಕತೆಗಳ ಪಾತ್ರಗಳ ಮೊರೆ ಹೋದ ರಾಜಕಾರಣಿಗಳು

ಭೋಪಾಲ್: ವಿಧಾನ ಸಭೆ ಹತ್ತಿರವಾಗಿರುವ ಮಧ್ಯ ಪ್ರದೇಶದಲ್ಲಿ ಪುರಾಣ ಕತೆ ಮತ್ತೆ ತೆರೆದುಕೊಂಡಿದೆ. ನಲವತ್ತೈದು ನಿಮಿಷಗಳ ಒಂದು ವೀಡಿಯೋ ಹೊರಬಂದಿದ್ದು ಕಾಂಗ್ರೆಸ್ಸಿನ ಕಮಲನಾಥ್ ರಾಮನಾಗಿ, ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ರಾವಣನಾಗಿ ಹೋರಾಡುವ ಚಿತ್ರಣ ಇದರಲ್ಲಿದೆ. ಸದ್ಯ ಮಧ್ಯಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದ್ದು, ವರ್ಷದೊಳಗೆ ವಿಧಾನ ಸಭೆಗೆ ಚುನಾವಣೆ ನಡೆಯಲಿದೆ.


ಶಿವರಾಜ್ ಸಿಂಗ್ ಚೌಹಾಣ್ ರ ಹತ್ತು ತಲೆಗಳಾಗಿ ರೈತರ ಆತ್ಮಹತ್ಯೆ, ಮಹಿಳೆಯರ ಮೇಲೆ ದೌರ್ಜನ್ಯ, ಬುಡಕಟ್ಟು ಜನರ ಮೇಲೆ ದೌರ್ಜನ್ಯ, ಹಣದುಬ್ಬರ, ನಿರುದ್ಯೋಗ, ಭ್ರಷ್ಟಾಚಾರ ಇತ್ಯಾದಿಗಳನ್ನು ಚಿತ್ರಿಸಲಾಗಿದೆ. “ನಿರ್ಣಯದ ಗಾಡಿ ಬಂದಿದೆ, 2023ರಲ್ಲಿ ಕಮಲನಾಥ್ ಮರಳುವರು” ಎಂದಿತ್ಯಾದಿ ವಾಚಕಗಳನ್ನು ಸಹ ಈ ರಾಮ ಬಾಣಗಳು ಹೇಳುತ್ತವೆ. ಒಬಿಸಿ ಮೀಸಲಾತಿ ಬಗ್ಗೆ ಬಿಜೆಪಿ, ಕಾಂಗ್ರೆಸ್ ವಾಗ್ವಾದ ತಾರಕಕ್ಕೇರಿರುವ ಈ ಸಮಯದಲ್ಲಿ ಈ ವೀಡಿಯೋ ಬಂದಿದೆ. ಕಾಂಗ್ರೆಸ್ ನವರು ನಾವು ಈ ವೀಡಿಯೋ ಮಾಡಿಲ್ಲ ಎನ್ನುತ್ತಾರೆ.


ಒಟ್ಟಾರೆ ಪುರಾಣ ಪಾತ್ರಗಳಾಗಿ ರಾಜಕಾರಣಿಗಳನ್ನು ಚಿತ್ರಿಸುವ ಮೂಲಕ ರಾಜ್ಯದಲ್ಲಿ ಹಿಂದುತ್ವ ಬೇರು ಬಿಟ್ಟಿದೆ ಎಂದೂ ವ್ಯಾಖ್ಯಾನಿಸಲಾಗಿದೆ. ಕಳೆದ ತಿಂಗಳು ಕೂಡ ರಜನಿಕಾಂತ್ ಮಾದರಿಯಲ್ಲಿ ಕಮಲನಾಥ್ ಸೂಪರ್ ಹೀರೋ ಆಗಿ ಖಳನಾಯಕರಾದ ಹಣದುಬ್ಬರ, ಮಕ್ಕಳ ಮತ್ತು ಮಹಿಳೆಯರ ಮೇಲೆ ಅನ್ಯಾಯ ಎಸಗುವವ, ನಿರುದ್ಯೋಗ ಮೊದಲಾದವನ್ನು ಸದೆಬಡಿಯುವ ಚಿತ್ರಣ ಅದರಲ್ಲಿದೆ. ಶಿವರಾಜ್ ಸಿಂಗ್ ಚೌಹಾಣ್ ರ ಜಂಗಲ್ ರಾಜ್ ಕೊನಿಗೊಳ್ಳಲಿ ಎಂದು ವೀಡಿಯೋದ ಕೊನೆಯಲ್ಲಿ ತೋರಿಸಲಾಗಿದೆ.


2018ರ ವಿಧಾನಸಭೆ ಚುನಾವಣೆಗೆ ಆರು ತಿಂಗಳು ಮೊದಲು ಕೂಡ ಇಂಥ ನಾನಾ ವೀಡಿಯೋಗಳು ಧುತ್ತೆಂದು ಬಂದಿದ್ದವು. ಆಗ ಗೃಹ ಸಚಿವ ಅಮಿತ್ ಶಾ ‘ವಾನರ ರಾಜ ದೂತ ಶಿವರಾಜ್’ ಎಂದಿದ್ದರು. ಅದರಂತೆ ಶಿವರಾಜ್ ಅಂಗದನಾಗಿ, ಕಮಲನಾಥ್ ರನ್ನು ರಾವಣನಂತೆ ಚಿತ್ರಿಸಿದ್ದ ವೀಡಿಯೋ ಹೊರಬಂದಿತ್ತು. ಆಗ ವೀಡಿಯೋದಲ್ಲಿ ಜ್ಯೋತಿರಾದಿತ್ಯ ಸಿಂಧ್ಯಾ ರಾವಣನ ಕಡೆ ಇದ್ದರು.
ಆಗ ಕಾಂಗ್ರೆಸ್ ದೂರು ದಾಖಲಿಸಿತ್ತು.


“ಈ ವೀಡಿಯೋಗಳಿಗೂ ಪಕ್ಷಕ್ಕೂ ಯಾವ ಸಂಬಂಧವೂ ಇಲ್ಲ. ಇದು ಸಾರ್ವಜನಿಕರ ಮನೋಭಾವವನ್ನು ಬಿಂಬಿಸಿದೆ ಅಷ್ಟೆ. ಬಿಜೆಪಿಯು ಎಲ್ಲ ಕ್ಷೇತ್ರಗಳಲ್ಲಿಯೂ ವಿಫಲವಾಗಿದೆ. ಕೃಷಿಯಿಂದ ಬುಲ್ಡೋಜರ್ ವರೆಗಿನ ಬಿಜೆಪಿ ರಾಜಕೀಯ ಜನರಿಗೆ ಸಾಕಾಗಿದೆ. ಜನರು ಚುನಾವಣೆಯಲ್ಲಿ ಅವರಿಗೆ ಸರಿಯಾದ ಉತ್ತರ ನೀಡುವರು” ಎಂದು ಮಧ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಪಟ್ವಾರಿ ಹೇಳಿದರು.
“ಎಲ್ಲ ಪಕ್ಷಗಳ ಅವರ ಬೇಜವಾಬ್ದಾರಿ ಧ್ಯೇಯಕ್ಕೆ ರೋಸಿ ಹೋಗಿದ್ದಾರೆ. ರಾಜಕೀಯದಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.”ಎಂದು ಬಿಜೆಪಿ ರಾಜ್ಯ ಮಾಧ್ಯಮ ಮುಖ್ಯಸ್ಥ ಲೋಕೇಂದ್ರ ಪರಾಶರ್ ಹೇಳಿದರು.

Join Whatsapp
Exit mobile version