Home ಟಾಪ್ ಸುದ್ದಿಗಳು ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳ ಮೂಲಕ ಆಮಿಷ ಒಡ್ಡುವುದು ಗಂಭೀರ ವಿಷಯ: ಸುಪ್ರೀಂ...

ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳ ಮೂಲಕ ಆಮಿಷ ಒಡ್ಡುವುದು ಗಂಭೀರ ವಿಷಯ: ಸುಪ್ರೀಂ ಕೋರ್ಟ್

ನವದೆಹಲಿ: ಚುನಾವಣಾ ಸಂದರ್ಭದಲ್ಲಿ  ಜನರಿಗೆ ರಾಜಕೀಯ ಪಕ್ಷಗಳು  ಉಚಿತ ಕೊಡುಗೆಗಳ ಮೂಲಕ ಆಮಿಷ ಒಡ್ಡುವುದು ಮತ್ತು ಅವುಗಳನ್ನು  ವಿತರಿಸುವುದು  ಗಂಭೀರ ವಿಷಯವಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಉಚಿತ ಕೊಡುಗೆಗಳನ್ನು ವಿತರಿಸುವ ಬದಲು ಆ ಹಣವನ್ನು ಜನರ ಕಲ್ಯಾಣಕ್ಕಾಗಿ ವ್ಯಯಿಸಬೇಕೆಂದು ನ್ಯಾಯಾಲಯ ಹೇಳಿದೆ.

ಚುನಾವಣೆ ಸಮಯದಲ್ಲಿ ಮತದಾರರಿಗೆ ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳ ಮೂಲಕ ಆಮಿಷ ಒಡ್ಡುವುದಕ್ಕೆ ತಡೆ ಹಾಕಬೇಕೆಂದು ಕೋರಿ, ವಕೀಲ ಅಶ್ವಿನಿ ಉಪಾಧ್ಯಾಯ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಪೀಠವು ನಡೆಸಿತು

ಚುನಾವಣಾ ಪ್ರಣಾಳಿಕೆಯನ್ನು ನಿಯಂತ್ರಿಸಲು ಮತ್ತು ಅದರಲ್ಲಿ ನೀಡಿದ ಭರವಸೆಗಳಿಗೆ ರಾಜಕೀಯ ಪಕ್ಷಗಳನ್ನು ಹೊಣೆಗಾರರನ್ನಾಗಿ ಮಾಡಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಅರ್ಜಿಯಲ್ಲಿ ಕೇಳಲಾಗಿತ್ತು.

ಈ ಸಂದರ್ಭದಲ್ಲಿ ಆರ್ಥಿಕತೆಯಿಂದ ಹಣದ ನಷ್ಟವಾಗುತ್ತಿದೆ ಮತ್ತು ಅದನ್ನು ಮೂಲ ಸೌಕರ್ಯ ಅಭಿವೃದ್ಧಿಗೆ ಸಮತೋಲನಗೊಳಿಸಬೇಕಾಗಿದೆ ಎಂದು ಕೋರ್ಟ್ ಹೇಳಿದೆ.

ಇದು ಸಮಸ್ಯೆಯಲ್ಲ ಎಂದು ಯಾರೂ ಹೇಳುವುದಿಲ್ಲ. ಇದು ಗಂಭೀರ ಸಮಸ್ಯೆಯಾಗಿದೆ. ಉಚಿತ ಕೊಡುಗೆಗಳನ್ನು ಎಲ್ಲರೂ ಬಯಸುತ್ತಾರೆ. ಅದರ ವಿಚಾರವಾಗಿ ನಾವು ತೆರಿಗೆ ಪಾವತಿಸುತ್ತಿದ್ದೇವೆ ಎಂದು ಕೆಲವರು ಹೇಳಬಹುದು. ಆದರೆ, ಆ ತೆರಿಗೆ ಹಣವನ್ನು ಅಭಿವೃದ್ಧಿ ಪ್ರಕ್ರಿಯೆಗೆ ಬಳಸಬೇಕು. ಆದ್ದರಿಂದ, ಇದು ಗಂಭೀರ ಸಮಸ್ಯೆಯಾಗಿದೆ. ಹಾಗಾಗಿ, ಎರಡೂ ಕಡೆಯವರ ವಾದವನ್ನು ಆಲಿಸಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಹೇಳಿದ್ದಾರೆ.

ಈ ನಡುವೆ ನ್ಯಾಯಾಲಯ ವಿಚಾರಣೆಯನ್ನು ಆಗಸ್ಟ್ 17ಕ್ಕೆ ಮುಂದೂಡಲಾಗಿದೆ.

Join Whatsapp
Exit mobile version