Home ಟಾಪ್ ಸುದ್ದಿಗಳು ಕರ್ನಾಟಕದಲ್ಲಿ ಮುಸ್ಲಿಮ್ ವಿರೋಧಿ ಅಲೆ । ರಾಷ್ಟ್ರಪತಿ ಆಳ್ವಿಕೆಗೆ ಮುಸ್ಲಿಮ್ ರಾಜಕೀಯ ವೇದಿಕೆ ಆಗ್ರಹ

ಕರ್ನಾಟಕದಲ್ಲಿ ಮುಸ್ಲಿಮ್ ವಿರೋಧಿ ಅಲೆ । ರಾಷ್ಟ್ರಪತಿ ಆಳ್ವಿಕೆಗೆ ಮುಸ್ಲಿಮ್ ರಾಜಕೀಯ ವೇದಿಕೆ ಆಗ್ರಹ

ಬೆಂಗಳೂರು: ಇತ್ತೀಚೆಗೆ ಕರ್ನಾಟಕದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಸಂಘಪರಿವಾರ ಹರಡುತ್ತಿರುವ ದ್ವೇಷ, ಹಿಂಸಾಚಾರ ಮತ್ತು ತಾರತಮ್ಯವನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿರುವ ಹಿನ್ನೆಲೆಯಲ್ಲಿ ತಕ್ಷಣ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು ಆಗ್ರಹಿಸಿ ಕರ್ನಾಟಕ ಮುಸ್ಲಿಮ್ ರಾಜಕೀಯ ವೇದಿಕೆ, ರಾಷ್ಟ್ರಪತಿಗೆ ಪತ್ರ ಬರೆದಿದೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ಮುಸ್ಲಿಮ್ ವಿರೋಧಿ ಧೋರಣೆಯನ್ನು ಖಂಡಿಸಿ ರಾಷ್ಟ್ರಪತಿಗೆ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿದ ಸಂಸ್ಥೆಯ ಕಾರ್ಯದರ್ಶಿ ಸಿರಾಜ್ ಅಹ್ಮದ್ ಜಾಫೆರಿ ಅವರು ಈ ಸಂಬಂಧ ಸುಪ್ರೀಮ್ ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ ಹಿಜಾಬ್, ವ್ಯಾಪಾರ ಬಹಿಷ್ಕಾರ, ಹಲಾಲ್ ಹಟ್, ಆಝಾನ್ ಸೇರಿದಂತೆ ಹಲವು ವಿಚಾರಗಳಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಸಂಘಪರಿವಾರ ನಡೆಸುತ್ತಿರುವ ದ್ವೇಷ, ಹಿಂಸಾಚಾರ ಮತ್ತು ತಾರತಮ್ಯದ ಹಿನ್ನೆಲೆಯಲ್ಲಿ ಕರ್ನಾಟಕ ಮುಸ್ಲಿಮ್ ರಾಜಕೀಯ ವೇದಿಕೆ ಈ ಕ್ರಮ ಪ್ರದರ್ಶಿಸಿದೆ ಎಂದು ಹೇಳಲಾಗಿದೆ.

Join Whatsapp
Exit mobile version