Home ಟಾಪ್ ಸುದ್ದಿಗಳು ಚಾಕು ಇರಿತ, ಬೆಂಗಳೂರಿನಲ್ಲಿ ರಕ್ತದ ಮಡುವಿ‌ಲ್ಲಿದ್ದ ಮಹಿಳೆಯ ಪ್ರಾಣ ಉಳಿಸಿದ ಪೊಲೀಸರು

ಚಾಕು ಇರಿತ, ಬೆಂಗಳೂರಿನಲ್ಲಿ ರಕ್ತದ ಮಡುವಿ‌ಲ್ಲಿದ್ದ ಮಹಿಳೆಯ ಪ್ರಾಣ ಉಳಿಸಿದ ಪೊಲೀಸರು

ಬೆಂಗಳೂರು: ಬಾಣಸವಾಡಿ ಪೊಲೀಸರು ರಸ್ತೆಯಲ್ಲಿ ರಕ್ತದ ಮಡುವಿ‌ಲ್ಲಿ ಬಿದ್ದಿದ್ದ ಮಹಿಳೆಯ ಪ್ರಾಣ ಉಳಿಸಿದ್ದಾರೆ. ನಿಖಿತಾ (28) ಗಾಯಗೊಳಗಾದ ಮಹಿಳೆ. ತೀವ್ರ ರಕ್ತ ಸ್ರಾವವಾಗಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಮಹಿಳೆಯನ್ನು ಬಾಣಸವಾಡಿ ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ನಂತರ ನಾಲ್ಕು ಬಾಟಲಿ ರಕ್ತ ವ್ಯವಸ್ಥೆ ಮಾಡಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ನಿಖಿತಾರನ್ನು ಮಹಿಳಾ ಪೊಲೀಸ್ ಸಿಬ್ಬಂದಿಗಳೇ ಆರೈಕೆ ಮಾಡುತ್ತಿದ್ದಾರೆ.

ನಿಖಿತಾ (28) ದಿವಾಕರ್ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಪ್ರೀತಿಸಿ ಮದುವೆಯಾದ ಕಾರಣ ನಿಖಿತಾ ಪೋಷಕರಿಂದ ದೂರವಾಗಿದ್ದಳು. ದಂಪತಿ ಜೂನ್ 21 ರಂದು ಬೆಳಗಿನ ಜಾವ ಬೈಕ್​​ನಲ್ಲಿ ಹೋಗುತ್ತಿದ್ದರು. ಈ ವೇಳೆ ದಿವಾಕರ್ ರಸ್ತೆಯಲ್ಲಿ ಬೈಕ್ ನಿಲ್ಲಿಸಿ ಪತ್ನಿ ನಿಖಿತಾಳನ್ನು ಕೆಳಗೆ ಬೀಳಿಸಿ ಐದು ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

ಈ ಹಿನ್ನೆಲೆ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ನಿಖಿತಾಳನ್ನು ಬಾಣಸವಾಡಿ ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಪ್ರಾಣ ಉಳಿಸಿದ್ದಾರೆ. ಇನ್ನು ಕೌಟುಂಬಿಕ ಕಲಹ ಹಿನ್ನಲೆ ಪತಿ ದಿವಾಕರ್​​ ಚಾಕುವಿನಿಂದ ಇರಿದಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಬಾಣಸವಾಡಿ ಪೊಲೀಸರಿಂದ ಆರೋಪಿ ದಿವಾಕರ್​​ನನ್ನು ಬಂಧಿಸಿದ್ದಾರೆ. ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Join Whatsapp
Exit mobile version