Home ಟಾಪ್ ಸುದ್ದಿಗಳು ನೂಪುರ್ ಶರ್ಮಾ ಬೆಂಬಲಿಸಿದ್ದ ಹಿಂದೂ ಸೇವಾ ಸಮಿತಿಯ ಪ್ರಾಂತೀಯ ಅಧ್ಯಕ್ಷನ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು...

ನೂಪುರ್ ಶರ್ಮಾ ಬೆಂಬಲಿಸಿದ್ದ ಹಿಂದೂ ಸೇವಾ ಸಮಿತಿಯ ಪ್ರಾಂತೀಯ ಅಧ್ಯಕ್ಷನ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು !

ನವದೆಹಲಿ: ಪ್ರವಾದಿ ನಿಂದನೆ ಮಾಡಿದ್ದ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಲು ಪತ್ರಿಕಾಗೋಷ್ಠಿ ನಡೆಸಿದ್ದ ಹಿಂದೂ ಸೇವಾ ಸಮಿತಿಯ ಸ್ಥಾಪಕ ಮತ್ತು ಪ್ರಾಂತೀಯ ಅಧ್ಯಕ್ಷ ಪ್ರದೀಪ್ ಶರ್ಮಾ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ಪ್ರದೀಪ್ ಶರ್ಮಾ ವಿರುದ್ಧ ಸೆಕ್ಷನ್ 153 ಎ (ದ್ವೇಷವನ್ನು ಹರಡುವ ಪ್ರಯತ್ನ) ಮತ್ತು 295 ಎ (ಒಂದು ವರ್ಗವನ್ನು ಅವಮಾನಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಜೂನ್ 13 ರಂದು ಪ್ರದೀಪ್ ಶರ್ಮಾ ಗೆ ನೋಟಿಸ್ ನೀಡಲಾಗಿತ್ತು. ಆದರೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version