ಜೂಜಾಟದ ಅಡ್ಡೆಗೆ ಪೊಲೀಸ್ ದಾಳಿ; ನಗದು ಸಹಿತ ಆರೋಪಿಗಳ ಬಂಧನ

ಚಿಕ್ಕಮಗಳೂರು: ಜೂಜಾಟದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ ಆರೋಪಿಗಳ ಸಹಿತ ನಗದನ್ನು ವಶಕ್ಕೆ ಪಡೆದಿದುವ ಘಟನೆ ನಗರದ ಕೋಟೆಯ ಮೂರುಮನೆ ಹಳ್ಳಿಯಲ್ಲಿ ನಡೆದಿದೆ.


ಖಚಿತ ಮಾಹಿತಿಯ ಮೇರೆಗೆ ಅಕ್ರಮವಾಗಿ ಇಸ್ಪೀಟ್ ಆಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಚಿಕ್ಕಮಗಳೂರು ಪೊಲೀಸರು 7 ಜನ ಆರೋಪಿಗಳು ಮತ್ತು 33,430 ರೂಪಾಯಿ ನಗದನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟು ಒಂಭತ್ತು ಜನ ಆರೋಪಿಗಳು ಜೂಜಾಟದಲ್ಲಿ ತೊಡಗಿದ್ದು ದಾಳಿಯ ವೇಳೆ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ.

- Advertisement -


ಬಂಧಿತರನ್ನು ಸಿ.ಎನ್ ಚಂದ್ರಶೇಖರ್, ಸಿ.ಎಂ ವಿನಯ್ ಕುಮಾರ್, ಸಿ.ಎಸ್ ಹರೀಶ, ಅಶ್ವಥ್, ರಾಕೇಶ್, ರಕ್ಷಿತ್, ರಂಜಿತ್ ಕುಮಾರ್, ಕೆ.ಪಿ ನಟರಾಜ್ ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರು ನಗರ ಪಿ.ಎಸ್.ಐ ಸಿ.ಇ.ಎನ್. ಅಪರಾಧ ಪೊಲೀಸ್ ಠಾಣೆ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.