Home ಟಾಪ್ ಸುದ್ದಿಗಳು ಮಂಗಳೂರು | ಜೈಲಿನ ಮೇಲೆ ಪೊಲೀಸರ ದಾಳಿ: 25 ಮೊಬೈಲ್, ಗಾಂಜಾ ಸೇರಿ ಹಲವು ಸ್ವತ್ತು...

ಮಂಗಳೂರು | ಜೈಲಿನ ಮೇಲೆ ಪೊಲೀಸರ ದಾಳಿ: 25 ಮೊಬೈಲ್, ಗಾಂಜಾ ಸೇರಿ ಹಲವು ಸ್ವತ್ತು ವಶಕ್ಕೆ

ಮಂಗಳೂರು: ಕಾರಾಗೃಹದ ಮೇಲೆ ಮುಂಜಾನೆ ಪೊಲೀಸರು ದಾಳಿ ನಡೆಸಿದ್ದು, ಮೊಬೈಲ್ ಸೇರಿ ಹಲವು ನಿಷೇಧಿತ ವಸ್ತು ವಶಪಡಿಸಿಕೊಂಡಿದ್ದಾರೆ.


ಕೋಡಿಯಾಲ್ ಬೈಲ್ ನಲ್ಲಿರುವ ಜೈಲಿನಲ್ಲಿರುವ ಇಬ್ಬರು ಡಿಸಿಪಿಗಳು, ಮೂವರು ಎಸಿಪಿಗಳು, 15 ಪೊಲೀಸ್ ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ ಸುಮಾರು 150 ಮಂದಿ ಸಿಬ್ಬಂದಿ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಲಾಗಿದೆ.


ಈ ವೇಳೆ ಹಲವು ವಿಚಾರಣಾಧೀನ ಕೈದಿಗಳ ಬಳಿ 25 ಮೊಬೈಲ್ ಫೋನ್ ಗಳು, ಒಂದು ಬ್ಲೂಟೂತ್ ಸಾಧನ, 5 ಇಯರ್ಫೋನ್, ಒಂದು ಪೆನ್ ಡ್ರೈವ್, 5 ಚಾರ್ಜರ್, ಒಂದು ಜತೆ ಕತ್ತರಿ, 3 ಕೇಬಲ್, ಗಾಂಜಾ ಪ್ಯಾಕೆಟ್ ಗಳು ಪತ್ತೆಯಾಗಿವೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

Join Whatsapp
Exit mobile version