Home ಟಾಪ್ ಸುದ್ದಿಗಳು ಲಾಠಿಚಾರ್ಜ್ ವೇಳೆ ತ್ರಿವರ್ಣ ಧ್ವಜಕ್ಕೆ ಅವಮಾನ: ಪೊಲೀಸ್ ಅಧಿಕಾರಿ ವಿರುದ್ಧ ವ್ಯಾಪಕ ಆಕ್ರೋಶ

ಲಾಠಿಚಾರ್ಜ್ ವೇಳೆ ತ್ರಿವರ್ಣ ಧ್ವಜಕ್ಕೆ ಅವಮಾನ: ಪೊಲೀಸ್ ಅಧಿಕಾರಿ ವಿರುದ್ಧ ವ್ಯಾಪಕ ಆಕ್ರೋಶ

ಪಾಟ್ನಾ: ರಾಜಧಾನಿಯ ರಸ್ತೆಯಲ್ಲಿ ಪ್ರತಿಭಟನನಿರತ ಶಿಕ್ಷಕ ಅಭ್ಯರ್ಥಿಗಳ ಮೇಲೆ ಪಾಟ್ನಾ ಎಡಿಎಂ ಕೆಕೆ ಸಿಂಗ್ ಲಾಠಿಚಾರ್ಜ್ ಮಾಡಿ ಗೂಂಡಾಗಿರಿ ಮಾಡಿ ತ್ರಿವರ್ಣ ಧ್ವಜಕ್ಕೂ ಅವಮಾನ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕೆ.ಕೆ. ಸಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನನಿರತ ಅಭ್ಯರ್ಥಿಗಳಲ್ಲಿ ಒಬ್ಬರು ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹೊಂದಿದ್ದರೂ, ಕೆ.ಕೆ.ಸಿಂಗ್ ಲಾಠಿ ಚಾರ್ಜ್ ಮಾಡುವುದು ವೀಡಿಯೋದಲ್ಲಿದೆ. ಅಲ್ಲದೆ ತ್ರಿವರ್ಣ ಧ್ವಜವನ್ನು ನೇರವಾಗಿ ಗುರಿಯಾಗಿಸಿಕೊಂಡು ಅಭ್ಯರ್ಥಿಯ ಕೈಯ ಮೇಲೆ ದಾಳಿ ಮಾಡುವುದನ್ನು ಹಾಗೂ ತ್ರಿವರ್ಣ ಧ್ವಜಕ್ಕೆ ಸತತವಾಗಿ ಹೊಡೆಯುವುದನ್ನು ನೋಡಬಹುದು.

https://twitter.com/ashishyadavi/status/1561649423654047744?s=20&t=A1-HwD29XswMfez_K1iTYA

ಏಳನೇ ಹಂತದ ಶಿಕ್ಷಕರ ಯೋಜನಾ ಪ್ರಕ್ರಿಯೆಯಲ್ಲಿ ಸಿಟಿಇಟಿ ಮತ್ತು ಬಿಟಿಇಟಿ ಅಭ್ಯರ್ಥಿಗಳಿಗೆ ಅವಕಾಶ ನೀಡದಕ್ಕಾಗಿ ನೂರಾರು ಸಿಟಿಇಟಿ ಮತ್ತು ಬಿಟಿಇಟಿ ಅಭ್ಯರ್ಥಿಗಳು ಪಾಟ್ನಾದ ದಕ್ಬುಂಗಲೋವ್ ಸ್ಕ್ವೇರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Join Whatsapp
Exit mobile version