Home ಟಾಪ್ ಸುದ್ದಿಗಳು ಅಂದು ಕಾನ್ಸ್ಟೇಬಲ್, ಇಂದು IPS ಪಾಸ್ ಮಾಡಿ ಎಸಿಪಿ ಆಗಲು ಹೊರಟ ಫಿರೋಝ್ ಆಲಂ !

ಅಂದು ಕಾನ್ಸ್ಟೇಬಲ್, ಇಂದು IPS ಪಾಸ್ ಮಾಡಿ ಎಸಿಪಿ ಆಗಲು ಹೊರಟ ಫಿರೋಝ್ ಆಲಂ !

►ಕಠಿಣ ಪರಿಶ್ರಮಿಯೊಬ್ಬರ ಯಶೋಗಾಥೆ !

ಸಾಮಾನ್ಯ ಪೊಲೀಸ್ ಕಾನ್ಸ್ಟೇಬಲ್ ಆಗಿ ಇಲಾಖೆಗೆ ಸೇರಿದ್ದ ಕಠಿಣ ಪರಿಶ್ರಮಿ ಯುವಕನೊಬ್ಬ ತನ್ನ ಪರಿಶ್ರಮದ ಫಲವೆಂಬಂತೆ ಈಗ ಐಪಿಎಸ್ ಪಾಸ್ ಮಾಡಿ, ಎಸಿಪಿ ಆಗಿ ಕಾರ್ಯನಿರ್ವಹಿಸಲು ತಯಾರಾಗಿದ್ದಾರೆ. ದಿಲ್ಲಿ ಪೊಲೀಸರ ಪಿಸಿಆರ್ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಫಿರೋಝ್ ಆಲಂ, ಕೇಂದ್ರ ಲೋಕಸೇವಾ ಆಯೋಗದ (UPSC) ಪರೀಕ್ಷೆ ಬರೆದು ತೇರ್ಗಡೆ ಹೊಂದಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಫಿರೋಝ್ ಅವರು ಐಪಿಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಇದೀಗ ಅವರು ದೆಹಲಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ಅಗತ್ಯ ತರಬೇತಿಯಲ್ಲಿದ್ದು, ಬರುವ ಮಾರ್ಚ್ ವೇಳೆಗೆ ಎಸಿಪಿ ಆಗಿ ನಿಯೋಜನೆಗೊಳ್ಳಲಿದ್ದಾರೆ.  

ಉತ್ತರ ಪ್ರದೇಶ ಮೂಲದವರಾಗಿರುವ ಫಿರೋಝ್ ಆಲಂ, 2010 ರಲ್ಲಿ ದೆಹಲಿ ಪೊಲೀಸ್ ಸೇವೆಗೆ ಸೇರ್ಪಡೆಗೊಂಡಿದ್ದರು. ತನ್ನ ಪಿಯು ಪರೀಕ್ಷೆಯ ಬಳಿಕ ಫಿರೋಝ್ ಪೊಲೀಸ್ ಸೇವೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಆ ಬಳಿಕ ತನ್ನ ಮೇಲಧಿಕಾರಿಗಳ ಕಾರ್ಯನಿರ್ವಹಣೆ ಮತ್ತು ಶೈಲಿಯಿಂದ ಪ್ರಭಾವಿತರಾಗಿ ತಾನೂ ಒಂದು ದಿನ ಅವರಂತೆ ಆಗಬೇಕೆಂದು ಬಯಸಿದ್ದರು. ಇದೀಗ ಅವರ ಕನಸು ಸಾಕಾರಗೊಂಡಿದ್ದು, ಅವರ ಕಠಿಣ ಪರಿಶ್ರಮದಲ್ಲಿ ಸಫಲಾರಾಗಿದ್ದಾರೆ.

Join Whatsapp
Exit mobile version