Home ಟಾಪ್ ಸುದ್ದಿಗಳು ದೆಹಲಿ ಹೈಕೋರ್ಟ್ ಸಂಕೀರ್ಣದಲ್ಲಿ ಗುಂಡು ಹಾರಿಸಿಕೊಂಡು ಪೊಲೀಸ್ ಕಾನ್ಸ್ಟೇಬಲ್ ಆತ್ಮಹತ್ಯೆ!

ದೆಹಲಿ ಹೈಕೋರ್ಟ್ ಸಂಕೀರ್ಣದಲ್ಲಿ ಗುಂಡು ಹಾರಿಸಿಕೊಂಡು ಪೊಲೀಸ್ ಕಾನ್ಸ್ಟೇಬಲ್ ಆತ್ಮಹತ್ಯೆ!

ಹೊಸದಿಲ್ಲಿ: ದೆಹಲಿ ಹೈಕೋರ್ಟ್ ಸಂಕೀರ್ಣದಲ್ಲಿ ಪೊಲೀಸ್ ಪೇದೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಸಿಬ್ಬಂದಿಯನ್ನು ಅಲ್ವಾರ್ ಮೂಲದ ಕಾನ್ಸ್ಟೇಬಲ್ ಟಿಂಕು ರಾಮ್ (30) ಎಂದು ಗುರುತಿಸಲಾಗಿದೆ. ಹೈಕೋರ್ಟ್ ನ ಗೇಟ್ ನಂ.3 ರ ಮುಂದೆ ಮೃತದೇಹ ಪತ್ತೆಯಾಗಿದೆ.

ತಮ್ಮ ಸೇವಾ ರಿವಾಲ್ವರ್ ನಿಂದ ಗುಂಡು ಹಾರಿಸಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೊಸದಿಲ್ಲಿ ಜಿಲ್ಲಾ ಡೆಪ್ಯುಟಿ ಕಮೀಷನರ್ ದೀಪಕ್ ಯಾದವ್ ತಿಳಿಸಿದ್ದಾರೆ. ಕಾನ್ಸ್ಟೇಬಲ್ ಅನ್ನು ಹೈಕೋರ್ಟ್ ನ ಗೇಟ್ ನಂ.3 ರಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಕರ್ತವ್ಯ ವೇಳೆ ಸ್ವಯಂ ಗುಂಡು ಹಾರಿಸಿಕೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾನ್ ಸ್ಟೇಬಲ್ ರಾಮ್ ರಾಜಸ್ಥಾನದ ಸಶಸ್ತ್ರ ಕಾನ್ ಸ್ಟೇಬಲ್ ಗಳ 8ನೇ ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Join Whatsapp
Exit mobile version