ಪೊಲೀಸರು ಸ್ವಂತ ವಾಹನದ ಮೇಲೆ ಪೊಲೀಸ್​ ಎಂದು ಬರೆಸುವಂತಿಲ್ಲ: ಪರಮೇಶ್ವರ್​

- Advertisement -

ದಾವಣಗೆರೆ: ಪೊಲೀಸ್ ಇಲಾಖೆಯ ಅಧಿಕಾರಿಗಳು ‌ಹಾಗೂ ಸಿಬ್ಬಂದಿ ತಮ್ಮ ಸ್ವಂತ ವಾಹನದ ಮೇಲೆ ಪೊಲೀಸ್ ಎಂದು ಬರೆಸುವಂತಿಲ್ಲ. ಒಂದೇ ವೇಳೆ ಬರೆಸಿದ್ದರೇ ಅದು ಕಾನೂನು ಉಲ್ಲಂಘಿಸಿದಂತೆ ಎಂದು ಗೃಹ ಸಚಿವ ಡಾ.‌ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

- Advertisement -

ಶ್ರವಣ ಬೆಳಗೊಳದ ಶಾಸಕ ಬಾಲಕೃಷ್ಣ ಸಿಎನ್ ಅವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 561ಕ್ಕೆ ಲಿಖಿತ ಮೂಲಕ ಸಚಿವ ಡಾ. ಜಿ ಪರಮೇಶ್ವರ್​ ಉತ್ತರ ನೀಡಿದ್ದಾರೆ.

ಪ್ರಶ್ನೆ: ರಾಜ್ಯದ ಪೊಲೀಸ್​ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ತಮ್ಮ ಸ್ವಂತ ವಾಹನದ ಮೇಲೆ ಪೊಲೀಸ್​ ಎಂದು ಬರೆಸಿಕೊಂಡು ಸಂಚಾರ ಮಾಡಲು ಕಾನೂನಿನಲ್ಲಿ ಅವಕಾಶವಿದೆಯೇ?

- Advertisement -

ಉತ್ತರ: ರಾಜ್ಯದ ಪೊಲೀಸ್ ಇಲಾಖೆಯ ಅಧಿಕಾರಿಗಳು ‌ತಮ್ಮ ಸ್ವಂತ ವಾಹನದ ಮೇಲೆ ಪೊಲೀಸ್ ಎಂದು ಬರೆಸಿಕೊಂಡು ಸಂಚಾರ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ತಮ್ಮ ಸ್ವಂತ ವಾಹನಗಳ ಮೇಲೆ ಪೊಲೀಸ್ ಎಂದು ಬರೆಯಿಸಿಕೊಂಡಿರುವುದು ಗೃಹ ಇಲಾಖೆಯ ಗಮನಕ್ಕೆ ಬಂದಿದೆ. ಸ್ವಂತ ವಾಹನದ ಮೇಲೆ ಪೊಲೀಸ್ ಅಧಿಕಾರಿಗಳು ಹಾಗೂ ನೌಕರರು ಪೊಲೀಸ್ ಎಂದು ಬರೆಸಿದ್ದರೇ ಅವರ ವಿರುದ್ಧ 2022 ರ ಸರ್ಕಾರದ ಸುತ್ತೋಲೆ ಪ್ರಕಾರ ಕಾನೂನು ಕ್ರಮ ಆಗುತ್ತದೆ ಎಂದು ಗೃಹ ಸಚಿವ ಡಾ. ಜಿ‌.ಪರಮೇಶ್ವರ ಲಿಖಿತ ಉತ್ತರ ನೀಡಿದ್ದಾರೆ.

- Advertisement -


Must Read

Related Articles