ತಂದೆ ಸಾವಿಗೆ ಪೊಲೀಸರೇ ಕಾರಣ, ಇಲಾಖೆಯಲ್ಲಿದ್ದರೂ ನ್ಯಾಯ ಸಿಗುತ್ತಿಲ್ಲ | ಪೇದೆಯ ಅಳಲು

Prasthutha|

ವಿಜಯಪುರ : ಸ್ವತಃ ತಾವೇ ಪೊಲೀಸ್ ಇಲಾಖೆಯಲ್ಲಿದ್ದರೂ, ತಮ್ಮ ತಂದೆ ಸಾವಿಗೆ ನ್ಯಾಯ ದೊರೆಯುತ್ತಿಲ್ಲ ಎಂದು ಪೊಲೀಸ್ ಪೇದೆಯೊಬ್ಬರು ಆಪಾದಿಸಿದ್ದಾರೆ.

ಜಿಲ್ಲೆಯ ಸಿಂದಗಿ ಪೊಲೀಸ್ ಠಾಣೆ ಸಿಬ್ಬಂದಿ ತಮ್ಮ ತಂದೆಯ ಸಾವಿಗೆ ಕಾರಣರಾಗಿದ್ದಾರೆ. ತಾಯಿ ಹಾಗೂ ಸಹೋದರನ ಮೇಲೆ ದೌರ್ಜನ್ಯ ಎಸಗಿದ್ದಾರೆ. ಮುಖ್ಯಮಂತ್ರಿ ಕಚೇರಿಯಿಂದ ಆದೇಶ ಬಂದರೂ, ಸಿಂದಗಿ ಪೊಲೀಸರು ತಮಗೆ ನ್ಯಾಯ ದೊರಕಿಸಿಕೊಡುತ್ತಿಲ್ಲ ಎಂದು ಬೆಂಗಳೂರು ಯಲಹಂಕ ಪೊಲೀಸ್ ಠಾಣೆ ಹೆಡ್ ಕಾನ್ಸ್ ಟೆಬಲ್ ಬಸವರಾಜ ಪಾಟೀಲ್ ಆರೋಪ ಮಾಡಿದ್ದಾರೆ.

- Advertisement -

ಈ ಕುರಿತು ಬಸವರಾಜ್ ಅವರು ಮಾತನಾಡಿರುವ ವೀಡಿಯೊ ಒಂದು ವೈರಲ್ ಆಗಿದ್ದು, ಇಲಾಖೆಯಲ್ಲಿದ್ದರೂ, ತಮ್ಮ ಅಸಹಾಯಕತೆಯನ್ನು ಅವರು ಬಿಚ್ಚಿಟ್ಟಿದ್ದಾರೆ.  

- Advertisement -